4

ಜನಪ್ರತಿನಿಧಿಗಳ ವೇತನ ಹೆಚ್ಚಿಸುವ ಅಧಿಕಾರ ಪ್ರಶ್ನಿಸಿದ ಸಂಸದ ವರುಣ್ ಗಾಂಧಿ

Published:
Updated:
ಜನಪ್ರತಿನಿಧಿಗಳ ವೇತನ ಹೆಚ್ಚಿಸುವ ಅಧಿಕಾರ ಪ್ರಶ್ನಿಸಿದ ಸಂಸದ ವರುಣ್ ಗಾಂಧಿ

ಜೈಪುರ: ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ಜನಪ್ರತಿನಿಧಿಗಳ ಅಧಿಕಾರವನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಸಂಸದ ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.

ಇಲ್ಲಿನ ಕಾಲೇಜೊಂದರಲ್ಲಿ ಮಾತನಾಡಿದ ಅವರು, ‘ಕಳೆದ ಆರು ವರ್ಷಗಳಲ್ಲಿ ಸಂಸದರ ವೇತನವನ್ನು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿದೆ. 1952ರಿಂದ 1972ರ ವರೆಗೆ ಸಂಸತ್ತು ವರ್ಷದಲ್ಲಿ 150 ದಿನ ಕಾರ್ಯ ನಿರ್ವಹಿಸುತ್ತಿತ್ತು. ಈಗ 50 ದಿನ ಮಾತ್ರ ಕಾರ್ಯಾಚರಿಸುತ್ತಿದೆ’ ಎಂದು ಹೇಳಿದರು.

‘ಯಾರೇ ಆಗಲಿ ತಮ್ಮ ವೇತನವನ್ನು ತಾವೇ ನಿರ್ಧರಿಸಬಹುದೇ? ಯಾವ ಆಧಾರದಲ್ಲಿ ಸಂಸದರು ಮತ್ತು ಶಾಸಕರು ಹೀಗೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಗಳು ತಾವೇ ವೇತನ ಹೆಚ್ಚಿಸಿಕೊಳ್ಳುವುದಕ್ಕೆ ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದ ವರುಣ್ ಗಾಂಧಿ, ಈ ಕ್ರಮ ಪ್ರಜಾಪ್ರಭುತ್ವದ ನೀತಿಗಳಿಗೆ ವಿರುದ್ಧವಾದದ್ದು ಎಂದಿದ್ದಾರೆ.

ಇವನ್ನೂ ಓದಿ...

ಶ್ರೀಮಂತ ಸಂಸದರು ವೇತನ ತ್ಯಜಿಸಲಿ: ವರುಣ್‌ ಗಾಂಧಿ

ಪದೇ ಪದೇ ಸಂಸದರ ವೇತನ ಹೆಚ್ಚಳ ಬೇಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry