‘ಪದ್ಮಾವತಿ’ಗೆ ಬೆನ್ನುನೋವು

5

‘ಪದ್ಮಾವತಿ’ಗೆ ಬೆನ್ನುನೋವು

Published:
Updated:
‘ಪದ್ಮಾವತಿ’ಗೆ ಬೆನ್ನುನೋವು

‘ಪದ್ಮಾವತ್‌’ ಚಿತ್ರದಲ್ಲಿ ಅಭೂತಪೂರ್ವವಾಗಿ ನಟಿಸಿದ ದೀಪಿಕಾ ಪಡುಕೋಣೆ ಕೆಲದಿನಗಳಿಂದ ಮನೆಯಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ; ಅರ್ಥಾತ್‌, ಬೆಡ್‌ ರೆಸ್ಟ್‌ನಲ್ಲಿದ್ದಾರೆ!

ಸೋಂಕು ಜ್ವರ ಅಂದುಕೊಂಡಿರಾ? ಖಂಡಿತಾ ಅಲ್ಲ. ‘ಪದ್ಮಾವತ್‌’ ಚಿತ್ರದ ನಂತರ ಕಾಣಿಸಿಕೊಂಡಿರುವ ಭಾರಿ ಬೆನ್ನು ನೋವಿನ ಪರಿಣಾಮವಿದು. ಚಿತ್ರದಲ್ಲಿ ಯಾವುದೇ ದೈಹಿಕ ಕಸರತ್ತು ಇರದಿದ್ದರೂ ದೀಪಿಕಾಗೆ ಬೆನ್ನು ನೋವು ಹೇಗೆ ಕಾಣಿಸಿಕೊಂಡಿತು ಎಂದು ಯೋಚಿಸುತ್ತಿದ್ದೀರಾ?

ಭಾರಿ ತೂಕದ ಉಡುಗೆ ತೊಡುಗೆ ಧರಿಸಿ ದೀರ್ಘಾವಧಿ ಚಿತ್ರೀಕರಣದಲ್ಲಿ ಪಾಲ್ಗೊಂಡ ಪರಿಣಾಮವಾಗಿ ದೀಪಿಕಾ ಭಾರಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೈನಂದಿನ ಚಟುವಟಿಕೆ ಹಾಗೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಆಸೆಯಿದ್ದರೆ ಕಟ್ಟುನಿಟ್ಟಿನ ವಿಶ್ರಾಂತಿ ಪಡೆಯಲೇಬೇಕು ಹಾಗೂ ಹೈಹೀಲ್ಸ್‌ ಚಪ್ಪಲಿ ಧರಿಸುವುದಾಗಲಿ, ಹೆಚ್ಚು ಹೊತ್ತು ನಿಲ್ಲುವುದಾಗಲಿ ಮಾಡಕೂಡದು ಎಂದು ವೈದ್ಯರು ತಾಕೀತು ಮಾಡಿರುವ ಕಾರಣ ದೀಪಿಕಾ ವಿಧಿಯಿಲ್ಲದೆ ಬೆನ್ನಿಗೆ ವಿಶ್ರಾಂತಿ ಕೊಡುತ್ತಿದ್ದಾರೆ.

ದೀಪಿಕಾ, ಬರೋಬ್ಬರಿ 30 ಕೆ.ಜಿ. ತೂಕದ ಒಂದೊಂದು ಲೆಹೆಂಗಾ ಮತ್ತು ಭಾರಿ ಒಡವೆಗಳನ್ನು ಧರಿಸಿ ದಿನಕ್ಕೆ 14ರಿಂದ 16 ಗಂಟೆ ‘ಪದ್ಮಾವತ್’ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry