ಮರಳಿದ ಗಗನಯಾತ್ರಿಗಳು

7
ಬಾಹ್ಯಾಕಾಶದಲ್ಲಿ ಐದು ತಿಂಗಳು ಕಳೆದ ಮೂವರು

ಮರಳಿದ ಗಗನಯಾತ್ರಿಗಳು

Published:
Updated:
ಮರಳಿದ ಗಗನಯಾತ್ರಿಗಳು

ಜೆಜ್‌ಕಗನ್‌(ಕಜಕಸ್ತಾನ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಬ್ಬರು ಮತ್ತು ರಷ್ಯಾದ ಒಬ್ಬರು ಸೇರಿದಂತೆ ಮೂವರು ಗಗನಯಾತ್ರಿಗಳು ತಮ್ಮ ಐದು ತಿಂಗಳ ಅವಧಿಯ ಗಗನಯಾತ್ರೆಯಿಂದ ಬುಧವಾರ ಭೂಮಿಗೆ ಹಿಂದಿರುಗಿದ್ದಾರೆ.

ಗಗನಯಾತ್ರಿಗಳು ಮೊದಲು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದು, ಅಲ್ಲಿಂದ ಸೊಯುಜ್‌ ಎಂಎಸ್‌–06 ಗಗನನೌಕೆ ಮೂಲಕ ಭೂಮಿಗೆ ಬಂದಿಳಿದಿದ್ದಾರೆ. ಈ ಮೂವರು ಐದು ತಿಂಗಳ ಅವಧಿಯ ಬಾಹ್ಯಾಕಾಶ ಯೋಜನೆಯಡಿ ಸಂಶೋಧನೆ ನಿಮಿತ್ತ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದರು.

ರಷ್ಯಾದ ರಾಸ್‌ಕಾಸ್ಮೋಸ್‌ ಬಾಹ್ಯಾಕಾಶ ಸಂಸ್ಥೆಯ ಅಲೆಕ್ಸಾಂಡರ್‌ ಮಿಸುರ್ಕಿನ್‌, ನಾಸಾದ ಮಾರ್ಕ್‌ ವ್ಯಾಂಡ್‌ ಹೀ ಮತ್ತು ಜೋ ಅಕಾಬ ಇಲ್ಲಿನ ಆಗ್ನೇಯ ಭಾಗದ ಭೂಪ್ರದೇಶದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ.

‘ಗಗನಯಾತ್ರಿಗಳು ಸುಸೂತ್ರವಾಗಿ ಹಿಂದಿರುಗಿದ್ದು ಅವರು ಆರೋಗ್ಯವಾಗಿದ್ದಾರೆ’ ಎಂದು ರಾಸ್‌ಕಾಸ್ಮೋಸ್‌ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಸುರ್ಕಿನ್‌ (40), ಎರಡು ಯೋಜನೆಗಳಡಿ 334 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಮೂರು ಯೋಜನೆಗಳಡಿಯ ಅಧ್ಯಯನಕ್ಕೆ ಆಯ್ಕೆಯಾಗಿದ್ದ ಅಕಾಬ (50), 300 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇನ್ನೊಬ್ಬ ಗಗನಯಾತ್ರಿ ವ್ಯಾಂಡ್‌ ಹೀ (51) ಅವರಿಗೆ ಇದು ಮೊದಲ ಅನುಭವ. ಅವರು 150 ದಿನ ಬಾಹ್ಯಾಕಾಶದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry