ನೈತಿಕ ಮತದಾನಕ್ಕೆ ವಿದ್ಯಾರ್ಥಿ ರಾಯಭಾರಿ!

ಸೋಮವಾರ, ಮಾರ್ಚ್ 25, 2019
31 °C

ನೈತಿಕ ಮತದಾನಕ್ಕೆ ವಿದ್ಯಾರ್ಥಿ ರಾಯಭಾರಿ!

Published:
Updated:
ನೈತಿಕ ಮತದಾನಕ್ಕೆ ವಿದ್ಯಾರ್ಥಿ ರಾಯಭಾರಿ!

ಬಳ್ಳಾರಿ: ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನೈತಿಕ ಮತದಾನಕ್ಕೆ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ವಿದ್ಯಾರ್ಥಿಗಳು ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಯುವ ಮತದಾರರು ಮತ್ತು ಪೋಷಕರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಚರ್ಚಾ ಸ್ಪರ್ಧೆಯನ್ನು ಆಯೋಜಿಸಿ ಅದರಲ್ಲಿ ಬಹುಮಾನ ಪಡೆಯುವ ಮೂವರನ್ನು ಆಯ್ಕೆ ಮಾಡಿ ತರಬೇತಿ ನೀಡಿ, ಅವರಿಂದಲೇ ನೈತಿಕ ಮತದಾನದ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ.

‘ಮತದಾರರ ದಿನಾಚರಣೆಗೂ ಮುನ್ನವೇ ಹಲವೆಡೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆದರೆ ಆಗ ಪೂರ್ಣ ಪ್ರಮಾಣದಲ್ಲಿ ಎಲ್ಲ ಶಾಲೆ, ಕಾಲೇಜುಗಳನ್ನು ಒಳಗೊಳ್ಳಲು ಆಗಿರಲಿಲ್ಲ. ಕೆಲವೇ ದಿನಗಳಲ್ಲಿ ಎಲ್ಲ ಕಡೆ ವಿದ್ಯಾರ್ಥಿ ರಾಯಭಾರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಅಭಿಯಾನ ಸಮಿತಿಯ ಮುಖ್ಯಸ್ಥರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪತ್ರ ಅಭಿಯಾನ:‘ಮತವನ್ನು ಮಾರಿಕೊಳ್ಳಬಾರದು ಎಂದು ಜಾಗೃತಿ ಮೂಡಿಸಲು ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಪತ್ರ ಬರೆಸುವ ಅಭಿಯಾನವನ್ನೂ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದರು.

‘ಜಾಗೃತಿ ಅಭಿಯಾನ ವ್ಯವಸ್ಥಿತವಾಗಿ ನಡೆಯಬೇಕು ಎಂಬ ಉದ್ದೇಶದಿಂದ 75 ದಿನಗಳ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಎಲ್ಲ ಇಲಾಖೆಗಳೂ ಅವುಗಳ ವ್ಯಾಪ್ತಿಯ ಜನಸಮುದಾಯದ ನಡುವೆ ಜಾಗೃತಿ ಅಭಿಯಾನ ಮೂಡಿಸಬೇಕು. ಪ್ರತಿ ಅಂಗನವಾಡಿ, ನ್ಯಾಯಬೆಲೆ ಅಂಗಡಿ, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲೆಡೆ ಅಭಿಯಾನ ಹಮ್ಮಿಕೊಳ್ಳಲು ನಿರ್ದಿಷ್ಟ ಅಧಿಕಾರಿ, ಸಿಬ್ಬಂದಿಗೆ ಜವಾಬ್ದಾರಿ ವಹಿಸಲಾಗುವುದು’ ಎಂದು ಹೇಳಿದರು.

ವಿಶೇಷ ಅನುಕೂಲ: ‘ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಎಷ್ಟು ಅಂಗವಿಕಲರು ಮತ್ತು ವೃದ್ಧರು ಇದ್ದಾರೆ ಎಂಬ ಅಂಕಿ–ಅಂಶವನ್ನೂ ಸಂಗ್ರಹಿಸಲಾಗಿದೆ. ಅಸಹಾಯಕತೆ ಕಾರಣಕ್ಕೆ ಅವರು ಮತದಾನದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಅವರಿಗೆ ವಿಶೇಷ ಅನುಕೂಲ ಕಲ್ಪಿಸಲಾಗುವುದು’ ಎಂದರು.

ಹಾಸ್ಟೆಲ್‌ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಅಭಿಯಾನ

ಅಂಗವಿಕಲರು, ವೃದ್ಧರು ಹೆಚ್ಚಿರುವ ಮತಗಟ್ಟೆಗಳಲ್ಲಿ ಸೌಲಭ್ಯ

ಎಲ್ಲ ಇಲಾಖೆಗಳಿಗೂ ಅಭಿಯಾನದ ಹೊಣೆ

* ಹಿಂದಿನ ಚುನಾವಣೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿರುವ ಮತಗಟ್ಟೆಗಳ ಕಡೆಗೂ ಗಮನಹರಿಸಲಾಗುವುದು

– ಡಾ. ಕೆ.ವಿ.ರಾಜೇಂದ್ರ, ಮತದಾರರ ಜಾಗೃತಿ ಅಭಿಯಾನದ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry