ಬಂತು ಸಲಾಮು!

7

ಬಂತು ಸಲಾಮು!

Published:
Updated:
ಬಂತು ಸಲಾಮು!

ನಿನ್ನ ಮನೆಯ ಬಾಗಿಲಿಗೆ

ಬಂತು ಸಲಾಮು

ಕೊಟ್ಟದ್ದನ್ನು ಬೇಡನ್ಬೇಡ

ತಗೊ ಇನಾಮು!

‌ಆಣೆ ಭಾಷೆ ಹೇಳಿದ್ಮೇಲೆ

ಜೇಬಿಗಿಡ್ತಾರೆ

ಎಣಿಸಿ ನೋಡಿ, ಸಾಲ್ದು ಅಂದ್ರೆ

ಕವರ್‌ ಕೊಡ್ತಾರೆ!

ಹೆಂಡ್ರು ಮಕ್ಳದ್ದೆಲ್ಲಾ ಸೇರಿ

ಲೆಕ್ಕ ಕೇಳ್ತಾರೆ!

ಚೀಟಿ ಬರ್ದು ಕೈಗೆ ಕೊಟ್ಟು

ಬಾಟ್ಳು ಕೊಡ್ತಾರೆ!

ಮಾಯದಂತ ವೋಟಿನಾಟ

ಹಣದ ಮಳೆಯಿದು

ಐದು ವರ್ಷಕ್ಕೊಮ್ಮೆ ಹರಿವ

ಕೊಳೆಯ ಹಣವದು!

–ದೇವಕಿಸುತ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry