ನಾಪತ್ತೆಯಾಗಿದ್ದ ಮಕ್ಕಳು ಹೈದರಾಬಾದ್‌ನಲ್ಲಿ ಪತ್ತೆ

7

ನಾಪತ್ತೆಯಾಗಿದ್ದ ಮಕ್ಕಳು ಹೈದರಾಬಾದ್‌ನಲ್ಲಿ ಪತ್ತೆ

Published:
Updated:

ಬೆಂಗಳೂರು: ಸಿ.ವಿ. ರಾಮನ್ ನಗರದಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಹೈದರಾಬಾದ್‌ನಲ್ಲಿ ಗುರುವಾರ ಪತ್ತೆಯಾಗಿದ್ದಾರೆ.

ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಅವರು 7ನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಗೆ ಹೋಗುವುದಾಗಿ ಹೇಳಿ ಬುಧವಾರ ಮನೆಯಿಂದ ಹೋಗಿದ್ದ ಅವರು, ರಾತ್ರಿಯಾದರೂ ವಾಪಸ್‌ ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು, ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

‘ಮಾರ್ಚ್‌ 2ರಿಂದ ಪರೀಕ್ಷೆಗಳಿದ್ದವು. ಅದಕ್ಕೆ ಹೆದರಿದ ಮಕ್ಕಳು, ಮನೆಯನ್ನು ತೊರೆದು ರೈಲಿನಲ್ಲಿ ಹೈದರಾಬಾದ್‌ಗೆ ಹೋಗಿದ್ದರು. ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ವೇಳೆ ಇದು ಗೊತ್ತಾಯಿತು‌’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry