ತರಳಬಾಳು ಸ್ವಾಮೀಜಿ ಪ್ರಯೋಗಕ್ಕೆ ಟಿಕೆಟ್ ಆಕಾಂಕ್ಷಿಗಳ ಒಪ್ಪಿಗೆ

7

ತರಳಬಾಳು ಸ್ವಾಮೀಜಿ ಪ್ರಯೋಗಕ್ಕೆ ಟಿಕೆಟ್ ಆಕಾಂಕ್ಷಿಗಳ ಒಪ್ಪಿಗೆ

Published:
Updated:
ತರಳಬಾಳು ಸ್ವಾಮೀಜಿ ಪ್ರಯೋಗಕ್ಕೆ ಟಿಕೆಟ್ ಆಕಾಂಕ್ಷಿಗಳ ಒಪ್ಪಿಗೆ

ಜಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹಣ, ಹೆಂಡ ಇತರೆ ಆಮಿಷಗಳನ್ನು ಒಡ್ಡದೆ ಮತಯಾಚನೆ ಮಾಡಬೇಕು ಎಂಬ ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯೋಗಕ್ಕೆ ಬದ್ಧರಾಗಿರುವುದಾಗಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಘೋಷಿಸಿದರು.

ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಸಿರಿಗೆರೆಯ ತರಳಬಾಳು ಮಠದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಜಕೀಯ ಶುದ್ಧೀಕರಣ ಪ್ರಯೋಗ– 2018’ ಭ್ರಷ್ಟಾಚಾರ ಮುಕ್ತ ಚುನಾವಣಾ ಜನಜಾಗೃತಿ ಸಮಾರಂಭದಲ್ಲಿ ಕಾಂಗ್ರೆಸ್‌ ಶಾಸಕ ಎಚ್‌.ಪಿ.ರಾಜೇಶ್‌, ಬಿಜೆಪಿ ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ಹಾಗೂ ಇನ್ನಿತರ ಆಕಾಂಕ್ಷಿಗಳು ಸಾಮೂಹಿಕ ಪ್ರತಿಜ್ಞೆ ಕೈಗೊಂಡರು.

‘ಹಿಂದೆ ಜಗಳೂರಿನಲ್ಲಿ ನಾವು ಪಾರದರ್ಶಕ ಆಯ್ಕೆಗಾಗಿ ಸೂಚಿಸಿದ್ದ ಎಂ.ಬಸಪ್ಪ ಅವರೇ ಆಯ್ಕೆಯಾಗಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry