ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಮಾನೋತ್ಸವಕ್ಕೆ ವೈಭವದ ತೆರೆ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಸಮಾರಂಭಕ್ಕೆ ಭದ್ರಾನದಿ ತಟದಲ್ಲಿ ಸುರಗೀ ಸಮಾರಾಧನೆ ನೆರವೇರಿಸುವ ಮೂಲಕ ಶುಕ್ರವಾರ ವೈಭವದ ತೆರೆ ಬಿದ್ದಿತು.

ಸುರಗೀ ಸಮಾರಾಧನೆಯ ಪೂರ್ವಭಾವಿಯಾಗಿ ಪೀಠದ ಆವರಣದಲ್ಲಿ ವಸಂತೋತ್ಸವ ಕಾರ್ಯಕ್ರಮವು ಸಂಪ್ರದಾಯ ಬದ್ಧವಾಗಿ ನಡೆಯಿತು. ವಸಂತೋತ್ಸವದಲ್ಲಿ ರಂಭಾಪುರಿ ಸ್ವಾಮೀಜಿಯ ಅಪ್ಪಣೆಯ ನಂತರ ನಂದಿ ವೇಷಧಾರಿಯಿಂದ ಹೇಳಿಕೆ– ಕೇಳಿಕೆ ಹಾಗೂ ಓಕುಳಿಯಾಟ ನಡೆಯಿತು.

ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭದ್ರಾನದಿಯ ತಟದಲ್ಲಿ ಈಶ್ವರ ಲಿಂಗ ಹಾಗೂ ಬಸವ ಮೂರ್ತಿಗಳಿಗೆ ಪ್ರಥಮ ಪೂಜೆ ಸಲ್ಲಿಸಿದರು. ನಂತರ ನದಿತೀರದಲ್ಲಿ ನಿರ್ಮಿಸಿದ್ದ ಕುಟೀರದಲ್ಲಿ ರುದ್ರಾಭಿಷೇಕ, ಲೋಕಕಲ್ಯಾಣಾರ್ಥ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ, ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT