ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

7

ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

Published:
Updated:
ರಾಜ್ಯದ ಭೂಮಿ ದೋಚಿದ ಸಿ.ಎಂ ಇದೀಗ ವಿದೇಶಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ‘ಲೆಕ್ಕಕೊಡಿ’ ಕನ್ನಡಿಗರಿಗೆ, ‘ಲೆಕ್ಕಕೊಡಿ’ ಬೆಂಗಳೂರಿನ ಜನರಿಗೆ ಎಂಬ ಅಭಿಯಾನ ನಡೆಸುತ್ತಿರುವ ಬಿಜೆಪಿ, ಚಾರ್ಜ್ ಶೀಟ್‍ನಲ್ಲಿ ಮಿಝೋರಾಂ ರಸ್ತೆಯ ಚಿತ್ರ ಬಳಸಿಕೊಂಡಿದೆ ಎಂದು ಕಾಂಗ್ರೆಸ್‌ ಟೀಕೆಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ.

ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಆರೋಪಿಸಿದ್ದ ಬಿಜೆಪಿ ಮಿಝೋರಾಂನ ರಸ್ತೆಯ ಚಿತ್ರ ಪ್ರಕಟಿಸಿದೆ. ಜೊತೆಗೆ, ಬೆಂಗಳೂರಿನ ಕಸದ ಸಮಸ್ಯೆ ಪ್ರಸ್ತಾಪಿಸಿ ನೇಪಾಳದ ರಾಜಧಾನಿ ಕಾಠ್ಮಂಡುವಿನ ಚಿತ್ರ ಪ್ರಕಟಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಕಾಂಗ್ರೆಸ್ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಯು ತನ್ನ ಟ್ವಿಟರ್‌ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮೆರಿಕದ ಚಿತ್ರವನ್ನು ಪ್ರಕಟಿಸಿದೆ ಎಂದು ತಿರಗೇಟು ನೀಡಿದೆ.

‘ಸರ್ಕಾರದ ಅರಣ್ಯ ಇಲಾಖೆಯ ಜಾಹೀರಾತಿಗೆ ಉತ್ತರ ಅಮೆರಿಕದ ಪೆನ್ಸಿಲ್ವೆನಿಯಾದಲ್ಲಿರುವ ರೋಸ್ ಟ್ರೀ ಪಾರ್ಕ್‌ನ ಚಿತ್ರವನ್ನು ಪ್ರಕಟಿಸಿದ್ದಾರೆ. ಇದಕ್ಕೆ ಬಿಜೆಪಿ, ಸಿದ್ದರಾಮಯ್ಯನವರು ಕರ್ನಾಟಕದ ಅರಣ್ಯವನ್ನು ಒತ್ತುವರಿ ಮಾಡಿದ್ದು ಮಾತ್ರವಲ್ಲದೇ ಅಮೆರಿಕದಲ್ಲಿರುವ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಮತ್ತೊಂದು ಟ್ವೀಟ್‌ ಮಾಡಿರುವ ಬಿಜೆಪಿ, ‘ಇತ್ತೀಚಿಗೆ ತುಮಕೂರಿನ ಪಾವಗಡದಲ್ಲಿರುವ ಸೋಲಾರ್ ಪಾರ್ಕಿನ ಫೋಟೋಗೆ ಸಿದ್ದರಾಮಯ್ಯ ಅವರು ಟರ್ಕಿಯ ಸೋಲಾರ್ ಪಾರ್ಕಿನ ಫೋಟೋ ಬಳಸಿದ್ದಾರೆ. ಸಿದ್ದರಾಮಯ್ಯನವರು ರಾಷ್ಟ್ರೀಯ ನಾಯಕರಲ್ಲ ಅವರು ಈಗ ಅಂತಾರಾಷ್ಟ್ರೀಯ ನಾಯಕರು’ ಎಂದು ಬರೆದು ಸಿಎಂಗೆ ಟ್ಯಾಗ್ ಮಾಡಿರುವ ಬಿಜೆಪಿ ತನ್ನ ಮೇಲಿನ ಫೋಟೋ ಆರೋಪಕ್ಕೆ ತಿರುಗೇಟು ನೀಡಿದೆ.

‘ಲೆಕ್ಕಕೊಡಿ’ ಪುಸ್ತಕದಲ್ಲಿ ಬಿಜೆಪಿ ಪ್ರಕಟಿಸಿರುವ ಚಿತ್ರಗಳು

ಇದನ್ನೂ ಓದಿ...

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಆರೋಪಿಸಿ ಮಿಝೋರಾಂ ಚಿತ್ರ ಬಳಿಸಿದ ಬಿಜೆಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry