ಜಿವಿ ಮೊಬೈಲ್‍ ‌ಸ್ಮಾರ್ಟ್‌ಫೋನ್

ಶುಕ್ರವಾರ, ಮಾರ್ಚ್ 22, 2019
31 °C

ಜಿವಿ ಮೊಬೈಲ್‍ ‌ಸ್ಮಾರ್ಟ್‌ಫೋನ್

Published:
Updated:
ಜಿವಿ ಮೊಬೈಲ್‍ ‌ಸ್ಮಾರ್ಟ್‌ಫೋನ್

ಬೆಂಗಳೂರು: ಫೀಚರ್ ಮತ್ತು ಸ್ಮಾರ್ಟ್‌ಫೋನ್ ಬ್ರ್ಯಾಂಡ್‍ಗಳಲ್ಲಿ ಒಂದಾಗಿರುವ ಜಿವಿ ಮೊಬೈಲ್ಸ್, ರಿಲಯನ್ಸ್ ಜಿಯೊ ಜತೆಗಿನ ಸಹಭಾಗಿತ್ವದಲ್ಲಿ  4ಜಿ ವೋಲ್ಟೆ ಸ್ಮಾರ್ಟ್‌ಫೋನ್‌ಗಳನ್ನು ₹ 699ಕ್ಕೆ ನೀಡಲಿದೆ.

ಜಿವಿ ಮೊಬೈಲ್ಸ್‌ನ 4ಜಿ ವೋಲ್ಟೆ ಸ್ಮಾರ್ಟ್‌ಫೋನ್‌ಗಳ ಎಲ್ಲಾ ಶ್ರೇಣಿಗಳ ಮೇಲೆ ರಿಲಯನ್ಸ್ ಜಿಯೊ ಕೊಡುಗೆಯಾದ ₹ 2,200ಗಳ ಹಣ ವಾಪಸ್‌ ಸೌಲಭ್ಯ ಇರಲಿದೆ.

‘ಗ್ರಾಮಾಂತರ ಪ್ರದೇಶಗಳ ಗ್ರಾಹಕರೂ ಸ್ಮಾರ್ಟ್‌ಫೋನ್ ಬಳಕೆ ಮಾಡಬೇಕೆಂಬ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ಈ ಸ್ಮಾರ್ಟ್‌ಫೋನ್ ನೀಡಲಾಗುತ್ತಿದೆ’ ಎಂದು ಜಿವಿ ಮೊಬೈಲ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಂಕಜ್ ಆನಂದ್ ಹೇಳಿದ್ದಾರೆ.

ಗ್ರಾಹಕರಿಗೆ ಹಣ ಮರಳಿಸುವ ಕೊಡುಗೆಯಡಿ ಈ ಮೊಬೈಲ್‌ ಅನ್ನು 699 ರೂಪಾಯಿಗಳಿಗೆ ನೀಡಲಾಗುತ್ತಿದೆ. ₹ 198 ಅಥವಾ ₹ 299 ರೀಚಾರ್ಜ್‌  ಅನ್ವಯವಾಗಲಿದೆ. ಮೈಜಿಯೊ ಆ್ಯಪ್‍ನಲ್ಲಿ ರೀಚಾರ್ಜ್ ಮಾಡಿಕೊಂಡರೆ ಮಾತ್ರ ಈ  ಹಣ ವಾಪಸ್‌ ಕೊಡುಗೆ ಲಭ್ಯವಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry