ಆಸ್ಟೊರಿ ಸಾವು

7

ಆಸ್ಟೊರಿ ಸಾವು

Published:
Updated:
ಆಸ್ಟೊರಿ ಸಾವು

ರೋಮ್‌: ಇಲ್ಲಿಯ ಫೋರೆಂಟಿನಾ ತಂಡದ ನಾಯಕ ಡೇವಿಡ್ ಆಸ್ಟೊರಿ (31) ಅವರ ಸಾವಿನ ಕಾರಣ ಇಲ್ಲಿ ಇಟಾಲಿಯನ್‌ ಲೀಗ್‌ನ ಭಾನುವಾರದ ಎಲ್ಲ ಪಂದ್ಯಗಳನ್ನು ಮುಂದೂಡಲಾಯಿತು.

ಆಸ್ಟೊರಿ ಆಡಬೇಕಾಗಿದ್ದ ಯುಡಿನೆಸಿ ಮತ್ತು ಫೋರೆಂಟಿನಾ ನಡುವಿನ ಪಂದ್ಯವನ್ನು ಬೆಳಿಗ್ಗೆ ರದ್ದುಗೊಳಿಸಲಾಗಿತ್ತು. ನಂತರ ಇತರ ಪಂದ್ಯಗಳನ್ನು ಮುಂದೂಡಲು ನಿರ್ಧರಿಸಲಾಯಿತು.

ಆಸ್ಟೊರಿ ಮುಂಜಾನೆ ಹೋಟೆಲ್ ಕೊಠಡಿಯಲ್ಲಿ ಕುಸಿದು ಬಿದ್ದು  ಸಾವಿಗೀಡಾಗಿದ್ದರು. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು   ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಡೇವಿಡ್ ಅವರು ಎಸಿ ಮಿಲಾನ್ ತಂಡದಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಕ್ಯಾಗಲಿಯಾರಿ ಮತ್ರು ರೋಪಾ ತಂಡಗಳಿಗೂ ಆಡಿದ್ದರು. 2015ರಲ್ಲಿ ಅವರು ಫಿಯೊರೆಂಟಿನಾ ಕ್ಲಬ್ ಸೇರಿದ್ದರು. ಡೇವಿಡ್ ಅವರಿಗೆ ಎರಡು ವರ್ಷದ ಮಗಳು ಇದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry