ಶಿವಪುರ: ನೇತ್ರದಾನ ನೋಂದಣಿ

7

ಶಿವಪುರ: ನೇತ್ರದಾನ ನೋಂದಣಿ

Published:
Updated:

ಹೆಬ್ರಿ: ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಮಣಿಪಾಲ ಮತ್ತು ಹೆಬ್ರಿ ಜೇಸಿಐ ಹಾಗೂ ಕೆಎಂಸಿ ಮಣಿಪಾಲ ಸಹಯೋಗದಲ್ಲಿ ಡಾ.ಪಿ.ಎನ್.ಶ್ರೀನಿವಾಸ ರಾವ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ವಾಗ್ದಾನ ಘೋಷಣಾ ಶಿಬಿರ ಭಾನುವಾರ ನಡೆಯಿತು.

ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್ ಕುಮಾರ್ ಶಿವಪುರ, ಹೆಬ್ರಿ ಜೇಸಿಐ ಅಧ್ಯಕ್ಷೆ ವೀಣಾ ಆರ್.ಭಟ್, ಹೆಬ್ರಿ ರೋಟರಿ ಗ್ರಾಮೀಣ ದಳದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ರೋಟರಿ ಕ್ಲಬ್ ಉಡುಪಿ ಮಣಿಪಾಲ ಘಟಕದ ಪ್ರಮುಖರು, ಶಿಕ್ಷಕ ರಮಾನಂದ ಶೆಟ್ಟಿ, ಜೇಸಿಐನ ಉದಯ ಶೇರಿಗಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry