‌ಹೊಸ ತಾಲ್ಲೂಕು ಉದ್ಘಾಟನೆ ಜೊತೆಗೆ ಅನುದಾನ ಬಿಡುಗಡೆಯಾಗಲಿ: ಜಗದೀಶ್‌ ಶೆಟ್ಟರ್‌

7

‌ಹೊಸ ತಾಲ್ಲೂಕು ಉದ್ಘಾಟನೆ ಜೊತೆಗೆ ಅನುದಾನ ಬಿಡುಗಡೆಯಾಗಲಿ: ಜಗದೀಶ್‌ ಶೆಟ್ಟರ್‌

Published:
Updated:
‌ಹೊಸ ತಾಲ್ಲೂಕು ಉದ್ಘಾಟನೆ ಜೊತೆಗೆ ಅನುದಾನ ಬಿಡುಗಡೆಯಾಗಲಿ: ಜಗದೀಶ್‌ ಶೆಟ್ಟರ್‌

ಅಣ್ಣಿಗೇರಿ: 'ಹೊಸ ತಾಲ್ಲೂಕುಗಳನ್ನು ಉದ್ಘಾಟನೆ ಮಾಡುವುದರ ಜೊತೆಗೆ ಅಗತ್ಯ ‌ಅನುದಾನವನ್ನು ಬಿಡುಗಡೆ ‌ಮಾಡಬೇಕು' ಎಂದು ವಿಧಾನಸಭೆ ವಿರೋಧ ‌ಪಕ್ಷದ ನಾಯಕ ಜಗದೀಶ್ ಶೆಟ್ಟರ್ ‌ಒತ್ತಾಯಿಸಿದರು.

ನೂತನವಾಗಿ ‌ಅಸ್ತಿತ್ವಕ್ಕೆ ಬಂದ ಅಣ್ಣಿಗೇರಿ ‌ತಾಲ್ಲೂಕು ಕೇಂದ್ರ ಉದ್ಘಾಟನೆಗೂ‌‌ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಗದ್ದಿಗೌಡರ, ಹುಂಡೇಕಾರ,‌ ಪ್ರಕಾಶ್ ಸಮಿತಿಗಳಲ್ಲಿ ಅಣ್ಣಿಗೇರಿ ತಾಲ್ಲೂಕು ರಚನೆ ಬಗ್ಗೆ ಪ್ರಸ್ತಾವ ಇರಲಿಲ್ಲ. ನಾನು‌ ಮುಖ್ಯಮಂತ್ರಿಯಾಗಿ ಅಧಿಕಾರ ‌ವಹಿಸಿಕೊಂಡ ಕೂಡಲೇ ಅಣ್ಣಿಗೇರಿ ‌ಹಾಗೂ ಅಳ್ನಾವರ ಸೇರಿದಂತೆ 43 ತಾಲ್ಲೂಕು ರಚನೆಗೆ ಅನುಮತಿ ನೀಡಿದ್ದೆ. ಬಜೆಟ್ನಲ್ಲಿ ತಲಾ ₹ 2 ಕೋಟಿ ಅನುದಾನ ಘೋಷಿಸಿದ್ದೆ. ಇಷ್ಟು ದಿನ ಸುಮ್ಮನೆ ಇದ್ದ ಸರ್ಕಾರ ಚುನಾವಣೆ ಹತ್ತಿರ ಬಂದಂತೆ ತಾಬೋಡ ತೋಬಡ (ತರಾತುರಿಯಲ್ಲಿ) ತಾಲ್ಲೂಕು ಕೇಂದ್ರಗಳನ್ನು ಉದ್ಘಾಟನೆ ‌ಮಾಡುತ್ತಿದೆ' ಎಂದು ಟೀಕಿಸಿದರು.

ತಹಶೀಲ್ದಾರ್ ಕಚೇರಿ ಜೊತೆಗೆ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ‌ಆಸ್ಪತ್ರೆ ಸೇರಿದಂತೆ ‌ವಿವಿಧ ಇಲಾಖೆ ಕಚೇರಿಗಳು ಆರಂಭವಾಗಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry