ಮತದಾರರ ಪಟ್ಟಿ; ಹೆಸರು ಸೇರ್ಪಡೆಗೆ ಮನವಿ

7

ಮತದಾರರ ಪಟ್ಟಿ; ಹೆಸರು ಸೇರ್ಪಡೆಗೆ ಮನವಿ

Published:
Updated:

ಎಚ್.ಡಿಕೋಟೆ: ನಾಮಪತ್ರ ಸಲ್ಲಿಕೆ ಆಗುವ ಹಿಂದಿನ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ತಹಶೀಲ್ದಾರ್ ಕೃಷ್ಣ ತಿಳಿಸಿದರು.

ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆದುಹಾಕು ವುದು ಇತರೆ ಪ್ರಕ್ರಿಯೆ ನಡೆಸಲಾಗುತ್ತಿದೆ. ತಾಲ್ಲೂಕಿ ನಲ್ಲಿ ಒಟ್ಟು 272 ಮತಗಟ್ಟೆ ಇದ್ದು, ಫೆ.28ರಂದು ಅಂತಿಮ ಮತ ದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹೆಸರು ಕೈ ಬಿಟ್ಟಿದ್ದರೆ ಅಥವಾ ಲೋಪದೋಷ ಇದ್ದಲ್ಲಿ ಚುನಾವಣೆ ಶಾಖೆ ಗಮನಕ್ಕೆ ತರಬಹುದು. ಇದಕ್ಕಾಗಿ ನಿಯಂತ್ರಣಾ ಕೊಠಡಿ ತೆರೆಯಲಾಗಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಒಟ್ಟು 2,09,556 ಮತದಾರರಿದ್ದು, 1,05,936 ಪುರುಷ, 1,03,613 ಮಹಿಳಾ ಮತದಾರ ರಿದ್ದಾರೆ. ಪಕ್ಷಗಳ ಮುಖಂಡರ ಜತೆ ಚರ್ಚಿಸಲಾಗಿದೆ. ಎಲ್ಲರ ಸಹಕಾರ ಕೋರಲಾಗಿದೆ. ದೂರು, ಮಾಹಿತಿಗೆ ದೂ: 08228–255325 ಸಂಪರ್ಕಿಸ ಬಹುದು ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry