ಕಾರ್ಮಿಕರ ಶೋಷಣೆಗೆ ಸರ್ಕಾರದ ಬೆಂಬಲ

4
ಸಿದ್ದಾಪುರ: ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ದುರ್ಗಾಪ್ರಸಾದ್‌ ಆರೋಪ

ಕಾರ್ಮಿಕರ ಶೋಷಣೆಗೆ ಸರ್ಕಾರದ ಬೆಂಬಲ

Published:
Updated:

ಸಿದ್ದಾಪುರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕರ ಶೋಷಣೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದು, ಹಲವು ವರ್ಷಗಳ ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ಮುಖಂಡ ಐ.ಆರ್. ದುರ್ಗಾಪ್ರಸಾದ್ ದೂರಿದರು.

ಸಿದ್ದಾಪುರದಲ್ಲಿ ಭಾನುವಾರ ಸಿಪಿಐ(ಎಂ) ವತಿಯಿಂದ ನಡೆದ ನವಕರ್ನಾಟಕ ನಿರ್ಮಾಣಕ್ಕಾಗಿ ಕಾರ್ಮಿ ಕರ ಪ್ರಣಾಳಿಕೆ ಎಂಬ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಬರುವ ಚುನಾವಣೆಗಳಲ್ಲಿ ಮತದಾರರು ಎಚ್ಚರವಹಿಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಕಾರ್ಮಿಕರ ವಿರುದ್ಧ ನಡೆಯುತ್ತಿರುವ ಶೋಷಣೆ ಸೇರಿದಂತೆ ದುಡಿಯುವ ವರ್ಗಕ್ಕೆ ಸಂವಿಧಾನಾತ್ಮಕ ಹಕ್ಕುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ಬಿ .ರಮೇಶ್, ಜಿಲ್ಲಾ ಸಮಿತಿ ಸದಸ್ಯ ಎನ್.ಡಿ. ಕುಟ್ಟಪ್ಪನ್, ಪಕ್ಷದ ಕಾರ್ಮಿಕ ಸಂಘಟನೆಯ ಪ್ರಮುಖರಾದ ಪಿ.ಆರ್. ಭರತ್, ಮಹದೇವ್, ಪ್ರಮುಖರಾದ ಮೋಣಪ್ಪ , ಬೈಜು, ಮುಸ್ತಾಫ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry