ಎರಡು ಗಂಡು ಮಕ್ಕಳ ತಾಯಿಯಾದ ಸನ್ನಿ ಲಿಯೋನ್ !

7

ಎರಡು ಗಂಡು ಮಕ್ಕಳ ತಾಯಿಯಾದ ಸನ್ನಿ ಲಿಯೋನ್ !

Published:
Updated:
ಎರಡು ಗಂಡು ಮಕ್ಕಳ ತಾಯಿಯಾದ ಸನ್ನಿ ಲಿಯೋನ್ !

ನವದೆಹಲಿ: ಕಳೆದ ವರ್ಷ ಹೆಣ್ಣು ಮಗುವನ್ನು ದತ್ತು ಪಡೆದು ಅದರ ಪಾಲನೆ ಪೋಷಣೆಯಲ್ಲಿರುವ ಸನ್ನಿ ಲಿಯೋನ್ ಮತ್ತೊಮ್ಮೆ ತಾಯ್ತನದ ಸಂತಸದಲ್ಲಿದ್ದಾರೆ.

ಸನ್ನಿ ಹಾಗೂ ಪತಿ ಡಾನಿಯಲ್‌ ವೆಬ್ಬರ್‌ ದಂಪತಿ ಇದೀಗ ಆಶೀರ್ ಸಿಂಗ್ ವೆಬ್ಬರ್, ನೋಹಾ ಸಿಂಗ್ ವೆಬ್ಬರ್ ಎರಡು ಗಂಡು ಮಕ್ಕಳ ಪೋಷಕರು. ಇವರು ತಮ್ಮ ಜೀವನದ ಈ ಸಂತಸದ ಕ್ಷಣವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಇದು ನಿಜವಾಗಿಯೂ ದೇವರ ಕೃಪೆ. ನಮ್ಮ ಚಿಕ್ಕ ಕುಟುಂಬವನ್ನು ಮತ್ತೊಮ್ಮೆ ಸುಂದರವಾದ, ದೊಡ್ಡ ಕುಟುಂಬವನ್ನಾಗಿ ರೂಪಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ನಾವು ಖಂಡಿತವಾಗಿಯೂ ಊಹಿಸಿರಲಿಲ್ಲ. ಹಿಂದೆ ಪ್ರತಿಕ್ಷಣವನ್ನು ಸಂತೋಷವಾಗಿ ಕಳೆದಿದ್ದೇವೆ. ಈ ಮೂವರು ಮಕ್ಕಳು ನಮ್ಮ ಜೀವನವನ್ನು ಅದ್ಭುತವಾಗಿಸಿವೆ. ನನ್ನ ಕುಟುಂಬ ಇದೀಗ ಅರ್ಥಪೂರ್ಣಗೊಂಡಿದೆ. ದ ವೆಬ್ಬರ್ಸ್ !!’ ಎಂದು ಟ್ವೀಟ್ ಮಾಡಿದ್ದಾರೆ.

‘ನಾವು ಪರ್ಯಾಯ ತಾಯಿ ವ್ಯವಸ್ಥೆಯ ಮೊರೆ ಹೋದೆವು.  ಆಶೀರ್ ಸಿಂಗ್ ವೆಬ್ಬರ್, ನೋಹಾ ಸಿಂಗ್ ವೆಬ್ಬರ್ ಇವರಿಬ್ಬರು ನಮ್ಮ ಬಯೋಲಾಜಿಕಲ್ ಚಿಲ್ಟ್ರನ್. ದೇವರು ಪರ್ಯಾಯ ತಾಯಿ ಸ್ವರ್ಗದೇವತೆ ಮೂಲಕ ಈ ಇಬ್ಬರು ಮಕ್ಕಳನ್ನು ಕಳುಹಿಸಿಕೊಟ್ಟ ಕಾರಣ ಈ ಇಬ್ಬರು ಜನ್ಮತಾಳಿದ್ದಾರೆ’  ಎಂದು ಮಗುವಿನ ಆಗಮನ ಕ್ಷಣಗಳನ್ನು ಕೊಂಡಾಡಿದ್ದಾರೆ.

ಇದು ನಮ್ಮ ಜೀವನದ ವಿಸ್ಮಯಕಾರಿಯಾದ ಹೊಸ ಅಧ್ಯಾಯ. ಇದನ್ನು ನಾವೆಲ್ಲಾ ನಮ್ಮ ಬದುಕಿನ ಅತ್ಯದ್ಭುತ ಅಧ್ಯಾಯ ಎಂದೇ ನಮಬಿದ್ದೇವೆ. ಈ ಮೂಲಕ ಒಂದು ಅಮೋಘವಾದ ಪಯಣ ಆರಂಭವಾಗಿದೆ. ಇಂತಹ ವಿಭಿನ್ನ ವಿಸ್ಮಯಗಳ ಮೂಲಕ ನಮ್ಮ ಸಂತಸದ ಪಯಣ ಮುಂದುವರೆಯಲಿದೆ. ಹೆಮ್ಮೆಯ ಕುಟುಂಬ!!  ಎಂದು ಪತಿ ಡಾನಿಯಲ್‌ ವೆಬ್ಬರ್‌ ಅವರು ಖುಷಿ ಹಂಚಿಕೊಂಡಿದ್ದಾರೆ.

ಇದು ದೇವರ ಯೋಜನೆ! ಜೂನ್ 21, 2017 ಆ ದಿನ @dirrty99 ಕಡಿಮೆ ಅವಧಿಯಲ್ಲಿ ಮೂವರು ಮಕ್ಕಳನ್ನು ಪಡೆಯಲು ಸಾಧ್ಯವಿದೆ ಎಂದು ಅನಿಸಿತ್ತು. ಹೊಸ ಕುಟುಂಬದ ಬಗ್ಗೆ ಸರಿಯಾಗಿ ಯೋಚಿಸಿ ಪ್ರಯತ್ನಕ್ಕೆ ಕೈಹಾಕಿದೇವು. ಹಲವು ವರ್ಷಗಳ ನಂತರ ಆಶೀರ್ ಸಿಂಗ್ ವೆಬ್ಬರ್, ನೋಹಾ ಸಿಂಗ್ ವೆಬ್ಬರ್  ಆಗಮನದ ಮೂಲಕ ನಮ್ಮ ಕುಟುಂಬ ಸಂಪೂರ್ಣವಾಗಿ ಸುಂದರವಾಗಿ ರೂಪುಗೊಂಡಿದೆ. ನನ್ನ ಮಕ್ಕಳು ಜನಿಸಿದ್ದು ಒಂದು ವಾರದ ಹಿಂದೆಯಾದರೂ ನಮ್ಮ ಹೃದಯ ಹಾಗೂ ಕಂಗಳಲ್ಲಿ ಹಲವು ವರ್ಷಗಳ ಕಾಲ ಜೀವಂತವಾಗಿ ಉಳಿಯಲಿವೆ. ದೇವರು ಯೋಜಿತವಾಗಿ ನಮ್ಮ ಕುಟುಂಬಕ್ಕೆ ಒಂದು ವಿಶೇಷವಾದದುದನ್ನು ಕರುಣಿಸಿದ್ದಾನೆ. ನೀಡಿದ್ದಾನೆ. ನಾವು ಮೂವರು ಮಕ್ಕಳ ಪೋಷಕರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಎಲ್ಲರಿಗೂ ಆಶ್ಚರ್ಯ! ಎಂದು ಭಾವಚಿತ್ರದ ಮೂಲಕ ಮಕ್ಕಳ ಆಗಮನದಿಂದ ತಮ್ಮಲ್ಲಾದ ಆನಂದವನ್ನು ಭಾವಪೂರ್ಣವಾಗಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ನನಗೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಲವು ವರ್ಷಗಳ ತರುವಾಯ ನಾವು ಪರ್ಯಾಯ ತಾಯಿ ವ್ಯವಸ್ಥೆ (surrogacy )ಮೂಲಕ ಮಕ್ಕಳನ್ನು ಪಡೆದಿದ್ದೇವೆ. ಬಹಳ ಸಂತೊಷವಾಗುತ್ತಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry