ಉರುಳಿ ಬಿದ್ದ ಲಾರಿ: ಮದುವೆಗೆ ಹೊರಟಿದ್ದ 31ಮಂದಿ ಸಾವು

7

ಉರುಳಿ ಬಿದ್ದ ಲಾರಿ: ಮದುವೆಗೆ ಹೊರಟಿದ್ದ 31ಮಂದಿ ಸಾವು

Published:
Updated:
ಉರುಳಿ ಬಿದ್ದ ಲಾರಿ: ಮದುವೆಗೆ ಹೊರಟಿದ್ದ 31ಮಂದಿ ಸಾವು

ಅಹಮದಾಬಾದ್‌: ರಾಜ್‌ಕೋಟ್‌–ಭಾವ್‌ನಗರ ಹೆದ್ದಾರಿಯ ರಂಧೋರ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿದ್ದ 20 ಅಡಿ ಎತ್ತರದ ಸೇತುವೆಯಿಂದ ಲಾರಿ ಕೆಳಗೆ ಬಿದ್ದ ಪರಿಣಾಮ, ವರನ ಪೋಷಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಮದುವೆಗೆ ಹೊರಟ್ಟಿದ್ದ 31 ಮಂದಿ ಮೃತಪಟ್ಟಿದ್ದಾರೆ.

‘ಮದುವೆ ಸಮಾರಂಭದಲ್ಲಿ ಭಾಗಿಯಾಗಲು 60 ಮಂದಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ವೇಳೆ ಪ್ರಯಾಣಿಕರು ರಭಸವಾಗಿ ಸಿಮೆಂಟ್‌ ಮತ್ತು ಕಾಂಕ್ರೀಟ್‌ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ 26 ಮಂದಿ ಸಾವನ್ನಪ್ಪಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವ ಪ್ರದೀಪ್‌ ಸಿನ್ಹಾ ವಿಧಾನಸಭೆಯಲ್ಲಿ ತಿಳಿಸಿದರು.

ರಕ್ಷಣಾ ತಂಡ ಸ್ಥಳಕ್ಕೆ ಬರುವ ಮುನ್ನವೇ ಗ್ರಾಮಸ್ಥರು ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣ ತನಿಖೆಯ ಹಂತದಲ್ಲಿದೆ. ಪ್ರಾಥಮಿಕ ವರದಿಯ ಪ್ರಕಾರ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry