‘ಸಂಕುಚಿತ ಮನೋಭಾವದಿಂದ ಪ್ರತಿಭೆ ವ್ಯರ್ಥ’

7

‘ಸಂಕುಚಿತ ಮನೋಭಾವದಿಂದ ಪ್ರತಿಭೆ ವ್ಯರ್ಥ’

Published:
Updated:
‘ಸಂಕುಚಿತ ಮನೋಭಾವದಿಂದ ಪ್ರತಿಭೆ ವ್ಯರ್ಥ’

ಬೆಂಗಳೂರು: ‘ಭಾರತೀಯ ವಿದ್ಯಾರ್ಥಿ ಸಮುದಾಯ ಹೊಂದಿರುವ ಸಂಕುಚಿತ ಮನೋಭಾವ ಹಾಗೂ ಸೀಮಿತ ಯೋಜನೆಗಳಿಂದಾಗಿ ಪ್ರತಿಭೆಗಳು ವ್ಯರ್ಥವಾಗುತ್ತಿವೆ’ ಎಂದು ಹಿರಿಯ ವಿಜ್ಞಾನಿ ಡಾ.ವಿ.ಕೆ. ಅತ್ರೆ ತಿಳಿಸಿದರು.

ರೇವಾ ವಿಶ್ವವಿದ್ಯಾಲಯದಲ್ಲಿ ನಡೆದ ‘ರೇವಾ ರಿಸರ್ಚ್ ಕನ್‍ಕ್ಲೇವ್- 2018’ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಪೂರ್ಣಗೊಳಿಸಿದ ಕೂಡಲೇ ಹೆಚ್ಚಿನ ಯುವಕರು ಉದ್ಯೋಗಕ್ಕಾಗಿ ಹುಡುಕುತ್ತಾರೆ. ಸಂಶೋಧನಾ ಆಸಕ್ತಿಯನ್ನು ಬಿಡುತ್ತಾರೆ. ಇದರಿಂದಾಗಿ ನವ ವಿಜ್ಞಾನಿಗಳು ಹಾಗೂ ಸಂಶೋಧಕರು ಹುಟ್ಟುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಂತ್ರಜ್ಞಾನವು ಬದುಕಿನ ಭಾಗವಾಗಿ‌ರಬೇಕು. ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಶ್ಯಾಮರಾಜು, ‘ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ರೇವಾ ವಿಶ್ವವಿದ್ಯಾಲಯ ಸ್ಥಾನ ಪಡೆಯಬೇಕು. ಹೀಗಾಗಿ ಹೊಸ ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತಿದೆ, ಸಂಶೋಧನೆಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry