ಫೈನಲ್‌ಗೆ ವಿಜಯಾ ಬ್ಯಾಂಕ್‌

7

ಫೈನಲ್‌ಗೆ ವಿಜಯಾ ಬ್ಯಾಂಕ್‌

Published:
Updated:

ಜಮಖಂಡಿ: ಬೆಂಗಳೂರಿನ ವಿಜಯಾ ಬ್ಯಾಂಕ್‌ ಮತ್ತು ಮುಂಬೈನ ಮಹೀಂದ್ರಾ ಅಂಡ್ ಮಹೀಂದ್ರಾ ತಂಡಗಳು ನಿರಾಣಿ ಫೌಂಡೇಷನ್‌ ಆಶ್ರಯದಲ್ಲಿ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ‘ಎ’ ಗ್ರೇಡ್‌ ಕಬಡ್ಡಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿವೆ.

ಪುರುಷರ ವಿಭಾಗದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮಹೀಂದ್ರಾ ತಂಡ 39–17ರಲ್ಲಿ ಬೆಂಗಳೂರಿನ ರೈಲು ಗಾಲಿ ಕಾರ್ಖಾನೆ ಎದುರು ಗೆದ್ದಿತು. ವಿಜಯಿ ತಂಡ ಮೊದಲರ್ಧದ ಆಟ ಮುಗಿದಾಗ 20–10ರಲ್ಲಿ ಮುನ್ನಡೆ ಹೊಂದಿತ್ತು. ಎರಡನೇ ಅವಧಿಯಲ್ಲಿಯೂ ಚುರುಕಿನ ಆಟವಾಡಿ ಜಯದ ಅಂತರ ಹೆಚ್ಚಿಸಿಕೊಂಡಿತು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ವಿಜಯಾ ಬ್ಯಾಂಕ್‌ 48–18 ಪಾಯಿಂಟ್ಸ್‌ನಿಂದ ಎಎಸ್‌ಸಿ ತಂಡವನ್ನು ಪರಾಭವಗೊಳಿಸಿತು. ಮೊದಲರ್ಧದ ಆಟ ಮುಗಿದಾಗ ವಿಜಯಾ ಬ್ಯಾಂಕ್‌ 31–7ರಲ್ಲಿ ಮುನ್ನಡೆಯಲ್ಲಿತ್ತು.

ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯಗಳಲ್ಲಿ ಸೇಲಂನ ಎಸ್‌ಎಂಸಿ ತಂಡ 29–17ರಲ್ಲಿ ಬೆಂಗಳೂರಿನ ಕೆಎಸ್‌ಪಿ ತಂಡದ ವಿರುದ್ಧ, ಬಾಚಣಿಯ ಜೈಹನುಮಾನ ತಂಡ 28–21ರಲ್ಲಿ ಸೋನೆಪತ್‌ನ ಗುರುಕುಲ ತಂಡದ ಮೇಲೂ, ಮುಂಬೈನ ವೆಸ್ಟರ್ನ್‌ ರೈಲ್ವೆ ತಂಡ 21–1 ಅಂಕಗಳಿಂದ ಬೆಂಗಳೂರಿನ ಕೇಶವ ತಂಡದ ವಿರುದ್ಧವೂ, ಮಹಾರಾಷ್ಟ್ರ ಪೊಲೀಸ್‌ ತಂಡ 31–21ರಲ್ಲಿ ಪುಣೆಯ ಜಾಗೃತಿ ತಂಡದ ಮೇಲೂ ಜಯಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry