ಚೀನಾದಲ್ಲಿ ನಿರ್ಮಾಣಗೊಳ್ಳಲಿದೆ ದೈತ್ಯ ಪಾಂಡಾ ಉದ್ಯಾನ

7

ಚೀನಾದಲ್ಲಿ ನಿರ್ಮಾಣಗೊಳ್ಳಲಿದೆ ದೈತ್ಯ ಪಾಂಡಾ ಉದ್ಯಾನ

Published:
Updated:
ಚೀನಾದಲ್ಲಿ ನಿರ್ಮಾಣಗೊಳ್ಳಲಿದೆ ದೈತ್ಯ ಪಾಂಡಾ ಉದ್ಯಾನ

ಶಾಂಘೈ: ದೈತ್ಯ ಪಾಂಡಾಗಳ ರಕ್ಷಣೆಗಾಗಿ ಅಮೆರಿಕದ ಯೆಲ್ಲೊಸ್ಟೋನ್‌ ರಾಷ್ಟ್ರೀಯ ಉದ್ಯಾನಕ್ಕಿಂತಲೂ ಮೂರು ಪಟ್ಟು ವಿಸ್ತಾರವಾದ ರಾಷ್ಟ್ರೀಯ ಉದ್ಯಾನವನ್ನು ಚೀನಾ ನಿರ್ಮಿಸಲಿದೆ.

ದೈತ್ಯ ಪಾಂಡಾ ತಳಿಗಳ ಸಂತಾನೋತ್ಪತ್ತಿ ವೃದ್ಧಿಗಾಗಿ ನೈಋತ್ಯ ಚೀನಾದ ಪರ್ವತ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಈ ಕಾರ್ಯಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಅಂದಾಜು ₹10 ಸಾವಿರ ಕೋಟಿ (160 ಕೋಟಿ ಡಾಲರ್‌) ಹಣವನ್ನು ಮೀಸಲು ಇಡಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ.

27,134 ಚದರ ಕಿ.ಮೀ. ವಿಸ್ತಾರದ ಉದ್ಯಾನ ನಿರ್ಮಿಸುವ ಪ್ರಸ್ತಾವವನ್ನು ಆಡಳಿತರೂಢ ಕಮ್ಯುನಿಸ್ಟ್‌ ಸರ್ಕಾರವು, ಕಳೆದ ವರ್ಷ ಸಚಿವ ಸಂಪುಟದ ಮುಂದಿಟ್ಟಿತ್ತು ಎಂದು ಪತ್ರಿಕೆ ವದಿಯಲ್ಲಿ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry