ಕಾಂಗ್ರೆಸ್‌ ಶಾಸಕ ರಘು ಆಚಾರ್‌ ಕಚೇರಿಯಲ್ಲಿ ಐಟಿ ಶೋಧ

7

ಕಾಂಗ್ರೆಸ್‌ ಶಾಸಕ ರಘು ಆಚಾರ್‌ ಕಚೇರಿಯಲ್ಲಿ ಐಟಿ ಶೋಧ

Published:
Updated:
ಕಾಂಗ್ರೆಸ್‌ ಶಾಸಕ ರಘು ಆಚಾರ್‌ ಕಚೇರಿಯಲ್ಲಿ ಐಟಿ ಶೋಧ

ಬೆಂಗಳೂರು: ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ರಘು ಆಚಾರ್ ಕಚೇರಿಯಲ್ಲಿ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು ಗುರುವಾರ ಶೋಧ ಆರಂಭಿಸಿದ್ದಾರೆ.

ದೆಹಲಿಯಿಂದ ಬಂದಿರುವ ಐ.ಟಿ ಅಧಿಕಾರಿಗಳ ತಂಡ, ಜೆ.ಪಿ. ನಗರದ ಸೆಂಟ್ರಲ್ ಮಾಲ್ ಬಳಿ ಇರುವ ರಘು ಆಚಾರ್ ಕಚೇರಿಯಲ್ಲಿ ತಪಾಸಣೆ ನಡೆಸುತ್ತಿದೆ.

‘ನಾನು ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದೆ. ಬೆಳಿಗ್ಗೆಯೇ ನಮ್ಮ ಕಚೇರಿ ಸಿಬ್ಬಂದಿ ಕರೆ ಮಾಡಿ ವಿಷಯ ಮುಟ್ಟಿಸಿದರು. ಐ.ಟಿ ಅಧಿಕಾರಿಗಳು ಕೇಳುವ ಎಲ್ಲ ಮಾಹಿತಿಯನ್ನೂ ಒದಗಿಸಲು ತಿಳಿಸಿದ್ದೇನೆ’ ಎಂದು ರಘು ಆಚಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಚೇರಿಗೆ ಬಂದು ಮಾಹಿತಿ ನೀಡಬೇಕೆಂದು ನನಗೂ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

ರಘು ಆಚಾರ್ ರಿಯಲ್ ಎಸ್ಟೇಟ್ ಮತ್ತು ಗ್ರಾನೈಟ್ ಉದ್ಯಮ ನಡೆಸುತ್ತಿದ್ದು, ವಿಧಾನ ಪರಿಷತ್ತಿನಲ್ಲಿ ಚಿತ್ರದುರ್ಗ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry