ಯೋಜನೆ ವಿಳಂಬ: ವೆಚ್ಚ 200 ಪಟ್ಟು ಹೆಚ್ಚಳ!

ಮಂಗಳವಾರ, ಮಾರ್ಚ್ 19, 2019
26 °C

ಯೋಜನೆ ವಿಳಂಬ: ವೆಚ್ಚ 200 ಪಟ್ಟು ಹೆಚ್ಚಳ!

Published:
Updated:
ಯೋಜನೆ ವಿಳಂಬ: ವೆಚ್ಚ 200 ಪಟ್ಟು ಹೆಚ್ಚಳ!

ಬೆಂಗಳೂರು: ಯೋಜನೆ ಅನುಷ್ಠಾನ ವಿಳಂಬದಿಂದಾಗಿ ವೆಚ್ಚ 200 ಪಟ್ಟು ಹೆಚ್ಚಾಗಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ವರದಿ ಹೇಳಿದೆ.

ವಿಧಾನಸೌಧದಲ್ಲಿ ಶುಕ್ರವಾರ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ, ಕಲಬುರ್ಗಿ ಜಿಲ್ಲೆಯ ಬೆಣ್ಣೆತೊರಾ ನೀರಾವರಿ ಯೋಜನೆಗೆ 1960ರಲ್ಲಿ ₹ 78.83 ಕೋಟಿ ಅಂದಾಜು ಮಾಡಲಾಗಿತ್ತು. ವಿಳಂಬ ಮಾಡಿದ್ದರಿಂದ ವೆಚ್ಚ₹ 504.39 ಕೋಟಿ ಆಗಿದೆ ಎಂದರು.

ಅದೇ ರೀತಿ ಅಮರ್ಜಾ ಯೋಜನೆಗೆ 1972ರಲ್ಲಿ ₹ 5.70 ಕೋಟಿ ಅಂದಾಜಿಸಲಾಗಿದ್ದು, ಈಗ ವೆಚ್ಚದ ಮೊತ್ತ₹ 295.83 ಕೋಟಿಗೆ ಹೆಚ್ಚಳವಾಗಿದೆ. ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ಉಣಕಲ್ ಕೆರೆವರೆಗಿನ ಫ್ಲೈ ಓವರ್ ಕಾಮಗಾರಿಗೆ ಅನುಮತಿ ನೀಡಿದಾಗ ₹ 30 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಈಗ ಯೋಜನಾ ವೆಚ್ಚ ₹ 300ಕೋಟಿ ಆಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ  ಸಾಕ್ಷಿ ಎಂದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಸಾರ್ವಜನಿಕರ ಹಣ ನಷ್ಟ ಮಾಡುತ್ತಿದ್ದಾರೆ ಎಂದರು.

ಒಟ್ಟು 1,379 ಭರವಸೆಗಳ ಪೈಕಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ 957 ಭರವಸೆಗಳನ್ನು ಮುಕ್ತಾಯಗೊಳಿಲಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ, ಆರ್ಥಿಕ, ಮೂಲ ಸೌಲಭ್ಯ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ಅಧಿಕಾರಿಗಳು ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿದ್ದಾರೆ ಎಂದು ಹೊರಟ್ಟಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry