ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಹ್ವಾನ

7

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಹ್ವಾನ

Published:
Updated:

ಚಿಕ್ಕಮಗಳೂರು: ‘224 ಯುವ ನೇತಾರರ ಪಕ್ಷೇತರ ಅಭ್ಯರ್ಥಿಗಳ ಒಕ್ಕೂಟ’ದ ವತಿಯಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಯುವ ನೇತಾರ ಒಕ್ಕೂಟದ ಮುಖಂಡ ಸುನಿಲ್ ಕುಮಾರ್ ಇಲ್ಲಿ ಶುಕ್ರವಾರ ತಿಳಿಸಿದರು.

ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಅಧಿಕಾರದ ದಾಹಕ್ಕೆ ಬಿದ್ದಿವೆ. ಭ್ರಷ್ಟಚಾರ, ಜಾತಿ, ಧರ್ಮ, ಹಣ, ಹೆಂಡದ ಕಪಿಮುಷ್ಟಿಗೆ ಯುವಪೀಳಿಗೆಯನ್ನು ತಳ್ಳುತ್ತಿವೆ.ಒಕ್ಕೂಟ ದಲ್ಲಿ ಗುರುತಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸುವ ಯುವನೇತಾರರು 9880514455 ಸಂಪರ್ಕಿಸಬಹುದು ಎಂದು ತಿಳಿಸಿದರು.

ಒಕ್ಕೂಟದ ಮುಖಂಡರಾದ ಬಸವರಾಜ್ ಮಾಲಿ ಪಾಟೀಲ್, ನಾಗರಾಜ್ ಯಾದವ್, ರೋಲ್ಯಾಂಡ್ ಸೋನ್ಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry