‘ಮತಗಟ್ಟೆ ಮೇಲೆ ನಿಗಾ ವಹಿಸಲು ಸಮಿತಿ ರಚನೆ’

ಮಂಗಳವಾರ, ಮಾರ್ಚ್ 19, 2019
20 °C

‘ಮತಗಟ್ಟೆ ಮೇಲೆ ನಿಗಾ ವಹಿಸಲು ಸಮಿತಿ ರಚನೆ’

Published:
Updated:
‘ಮತಗಟ್ಟೆ ಮೇಲೆ ನಿಗಾ ವಹಿಸಲು ಸಮಿತಿ ರಚನೆ’

ಶಿರಹಟ್ಟಿ: ‘ಸುಗಮ ಚುನಾವಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ, ಯಾವುದೇ ಸಮಸ್ಯೆ ಉಂಟಾಗ ದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಇ.ಒ ಆರ್.ವೈ. ಗುರಿಕಾರ ಹೇಳಿದರು.

ಪಟ್ಟಣದ ಫಕೀರೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮತದಾರರ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ಬೂತ್‌ ಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸ ಬೇಕು. ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಅದನ್ನು ಮತದಾರರಿಗೆ ಮನದಟ್ಟು ಮಾಡಿಕೊಡಿ’ಎಂದರು.

‘ಅಂಗನವಾಡಿ, ಆಶಾ, ಗ್ರಾಮ ಲೆಕ್ಕಾಧಿಕಾರಿ, ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಒಳಗೊಂಡ 5ರಿಂದ 6 ಮಂದಿ ಸದಸ್ಯರನ್ನು ಹೊಂದಿರುವ ಸಮಿತಿ ರಚನೆ ಮಾಡಲಾಗುವುದು’ ಎಂದರು.

ಮತಗಟ್ಟೆಗೆ ಮೂಲಸೌಕರ್ಯ ಹಾಗೂ ಚುನಾವಣೆ ವೇಳೆ ನಡೆಯುವ ಅವ್ಯವಹಾರಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿ ಮಠ, ಫಕೀರೇಶ ಜಾಲಿ ಹಾಳ, ಬಿ.ಎಸ್. ಉಗ್ರಪ್ಪ, ವಸಂತ ಪೂರ್ಣಿಮಾ, ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ಗಿರೀಶ ಕೋಡಬಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry