ವಿಪ್ಲವ್ ದೇವ್ ಪ್ರಮಾಣ ವಚನ ಸಮಾರಂಭದಲ್ಲಿ ಅಡ್ವಾಣಿ ಅವರನ್ನು ಕಡೆಗಣಿಸಿದ ಮೋದಿ?

7

ವಿಪ್ಲವ್ ದೇವ್ ಪ್ರಮಾಣ ವಚನ ಸಮಾರಂಭದಲ್ಲಿ ಅಡ್ವಾಣಿ ಅವರನ್ನು ಕಡೆಗಣಿಸಿದ ಮೋದಿ?

Published:
Updated:
ವಿಪ್ಲವ್ ದೇವ್ ಪ್ರಮಾಣ ವಚನ ಸಮಾರಂಭದಲ್ಲಿ ಅಡ್ವಾಣಿ ಅವರನ್ನು ಕಡೆಗಣಿಸಿದ ಮೋದಿ?

ಅಗರ್ತಲಾ: ತ್ರಿಪುರಾದ ಮುಖ್ಯಮಂತ್ರಿಯಾಗಿ ವಿಪ್ಲವ್‌ ಕುಮಾರ್‌ ದೇವ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ವೇದಿಕೆಯಲ್ಲಿದ್ದ ರಾಜನಾಥ್ ಸಿಂಗ್, ಎಲ್.ಕೆ ಅಡ್ವಾಣಿ ಎದ್ದು ನಿಂತು ನಮಸ್ಕರಿಸಿದ್ದರು. ರಾಜನಾಥ್ ಸಿಂಗ್ ಅವರಿಗೆ ನಮಸ್ಕರಿಸಿದ ಮೋದಿ, ಅಡ್ವಾಣಿ ಬಳಿ ಬಂದಾಗ ಅವರನ್ನು ಕಡೆಗಣಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಜನತಾಕಾ ರಿಪೋರ್ಟರ್ ಪತ್ರಿಕೆಯ ವರದಿ ಪ್ರಕಾರ ವಿಪ್ಲವ್ ದೇವ್ ಅವರು ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಬಿಜೆಪಿ ನೇತಾರರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮೊದಲಾದ ಗಣ್ಯರು ಭಾಗಿಯಾಗಿದ್ದರು. 

ಮೋದಿಯವರು ವೇದಿಕೆಗೆ ಬಂದಾಗ ಗಣ್ಯರೆಲ್ಲಾ ಪ್ರಧಾನಿಗೆ ನಮಸ್ಕರಿಸಿದ್ದು, ಇದಕ್ಕೆ ಪ್ರತಿಯಾಗಿ ಮೋದಿ ನಮಸ್ಕರಿಸಿದ್ದಾರೆ. ಆದರೆ ಅಡ್ವಾಣಿ ಅವರ ಬಳಿಗೆ ಬಂದಾಗ ಮೋದಿ ಅವರು ಮುಖ ತಿರುಗಿಸಿದ್ದಾರೆ ಎಂದು ಟ್ವಿಟರಾತಿಗಳು ಆರೋಪಿಸುತ್ತಿದ್ದಾರೆ.

ವೇದಿಕೆಗೆ ಆಗಮಿಸಿದ ಮೋದಿ, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಜತೆ ಮಾತನಾಡಿದರೂ ಅಡ್ವಾಣಿಯವರತ್ತ ತಿರುಗಲಿಲ್ಲ. ಈ ವಿಡಿಯೊ ಬಗ್ಗೆ ಟ್ವಿಟರ್‍‍ನಲ್ಲಿ ಚರ್ಚೆಯಾಗುತ್ತಿದ್ದು, ಮೋದಿಯವರ ವರ್ತನೆ ಬಗ್ಗೆ ಹಲವರು ಬೇಸರ ವ್ಯಕ್ತ ಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry