ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್‌ ಪ್ರತಿಮೆಯ ರುಂಡ ಕಡಿದ ದುಷ್ಕರ್ಮಿಗಳು

ಬುಧವಾರ, ಮಾರ್ಚ್ 20, 2019
26 °C

ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್‌ ಪ್ರತಿಮೆಯ ರುಂಡ ಕಡಿದ ದುಷ್ಕರ್ಮಿಗಳು

Published:
Updated:
ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್‌ ಪ್ರತಿಮೆಯ ರುಂಡ ಕಡಿದ ದುಷ್ಕರ್ಮಿಗಳು

ಅಜಮ್‌ಗಡ(ಉತ್ತರ ಪ್ರದೇಶ): ರಾಷ್ಟ್ರ ನಾಯಕರ ಪುತ್ಥಳಿ ಭಂಜನ ದುಷ್ಕೃತ್ಯ ಇಂದು ಕೂಡ ಮುಂದುವರಿದಿದೆ. ಉತ್ತರ ಪ್ರದೇಶ ಅಜಮ್‌ಗಡದಲ್ಲಿ ನಿಂತಿರುವ ಭಂಗಿಯಲ್ಲಿ ಇದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಯ ರುಂಡವನ್ನೇ ದುಷ್ಕರ್ಮಿಗಳು ಇಂದು ಹೊಡೆದು ಉರುಳಿಸಿದ್ದಾರೆ. 

ವಿಷಯ ತಿಳಿದ ತಕ್ಷಣ, ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರನ್ನು ವಿಚಾರಿಸುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್‌ ಮಾಡಿದೆ. 

ತ್ರಿಪುರದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಗಳಿಸಿದ ಬಳಿಕ ಅಲ್ಲಿದ್ದ ಲೆನಿನ್‌ ಪ್ರತಿಮೆಯನ್ನು ಕಿಡಿಗೇಡಿಗಳು ಕೆಡವಿದ್ದರು. ಆ ಘಟನೆಯ ತರುವಾಯ ರಾಷ್ಟ್ರದ ಮಹನೀಯರ ಪುತ್ಥಳಿಗಳಿಗೆ ಹಾನಿ ಮಾಡುವ ದುಷ್ಕಾರ್ಯಗಳು ದೇಶದ ಹಲವೆಡೆ ನಡೆಯುತ್ತಲೇ ಇವೆ.

ಇದನ್ನೂ ಓದಿರಿ...
ಪುತ್ಥಳಿಗಳ ಭಂಜನೆ ಕುರಿತು ‘ಪ್ರಜಾವಾಣಿ’ ಸಂಪಾದಕೀಯ
ಅಸಹನೆಯ ಪರಾಕಾಷ್ಠೆ ಪ್ರಜಾಪ್ರಭುತ್ವ ವಿರೋಧಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry