ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ ಸಾನಿಧ್ಯ? ಆಕಾಶವಾಣಿಯನ್ನೂ ಹಿಂದಿಕ್ಕಿತೇ ಸಂಘ?

7

ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ ಸಾನಿಧ್ಯ? ಆಕಾಶವಾಣಿಯನ್ನೂ ಹಿಂದಿಕ್ಕಿತೇ ಸಂಘ?

Published:
Updated:
ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ ಸಾನಿಧ್ಯ? ಆಕಾಶವಾಣಿಯನ್ನೂ ಹಿಂದಿಕ್ಕಿತೇ ಸಂಘ?

ನವದೆಹಲಿ: ಆಕಾಶವಾಣಿ (ಆಲ್ ಇಂಡಿಯಾ ರೇಡಿಯೊ) ದೇಶದ ಶೇ.92 ಪ್ರದೇಶಗಳಲ್ಲಿ ತಮ್ಮ ಪ್ರಸಾರ ವ್ಯವಸ್ಥೆ ವ್ಯಾಪಿಸಿಕೊಂಡಿದ್ದರೆ, ಭೌಗೋಳಿಕವಾಗಿ ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾನಿಧ್ಯ ಹೊಂದಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

ನಾಗಪುರದಲ್ಲಿರುವ ತಮ್ಮ ಪ್ರಧಾನ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಆರ್‌ಎಸ್‌ಎಸ್‌ ಈ ವಿಷಯವನ್ನು ಹೇಳಿದೆ.

ದೇಶದಾದ್ಯಂತ 58,976 ಶಾಖೆಗಳನ್ನು ಆರ್‌ಎಸ್‌ಎಸ್‌ ಹೊಂದಿದೆ ಎಂದು ಪ್ರಸ್ತುತ ಸಂಘಟನೆ ಹೇಳುತ್ತಿದೆ.

ಮೂರುದಿನಗಳ ಕಾಲ ನಡೆಯುತ್ತಿರುವ ಈ ಸಭೆಯ ಮೊದಲ ದಿನ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್, ಭಾರತದ ಶೇ. 95 ಭೌಗೋಳಿಕ ಪ್ರದೇಶಗಳಲ್ಲಿ ಆರ್‌‍ಎಸ್ಎಸ್ ಚಟುವಟಿಕೆಗಳು ನಡೆಯುತ್ತಿವೆ. ನಾಗಾಲ್ಯಾಂಡ್, ಮಿಜೋರಾಂ ಮತ್ತು ಕಾಶ್ಮೀರ ಕಣಿವೆ ಹೀಗೆ ಕೆಲವು ಪ್ರದೇಶಗಳನ್ನು ಹೊರತು ಪಡಿಸಿದರೆ ನಾವು ದೇಶದಾದ್ಯಂತ ಇರುವಿಕೆ ಹೊಂದಿದ್ದೇವೆ. ಅಂದರೆ ಆಲ್ ಇಂಡಿಯಾ ರೇಡಿಯೊ ನೆಟ್ವರ್ಕ್ ಹೊಂದಿರುವುದಕ್ಕಿಂತ ಶೇ. 3ರಷ್ಟು ಹೆಚ್ಚು ಪ್ರದೇಶಗಳಲ್ಲಿ ನಮ್ಮ ಸಾನಿಧ್ಯವಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry