ಐ‍ಪಿಎಲ್‌ನಲ್ಲಿ ಶಮಿ ಆಡುವುದು ಅನುಮಾನ

7

ಐ‍ಪಿಎಲ್‌ನಲ್ಲಿ ಶಮಿ ಆಡುವುದು ಅನುಮಾನ

Published:
Updated:
ಐ‍ಪಿಎಲ್‌ನಲ್ಲಿ ಶಮಿ ಆಡುವುದು ಅನುಮಾನ

ನವದೆಹಲಿ: ಭಾರತ ತಂಡದ ಮಧ್ಯಮವೇಗದ ಬೌಲರ್‌ ಮಹಮ್ಮದ್‌ ಶಮಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 11ನೇ ಆವೃತ್ತಿಯಲ್ಲಿ ಆಡುವುದು ಅನುಮಾನವಾಗಿದೆ.

ಕೌಟುಂಬಿಕ ದೌರ್ಜನ್ಯ ಮತ್ತು ಶೀಲ ಶಂಕಿಸಿ ಹಲ್ಲೆ ನಡೆಸಿದ ಆರೋಪದಡಿ ಶಮಿ ವಿರುದ್ಧ ಅವರ ಪತ್ನಿ ಹಸೀನಾ ಜಹಾನ್‌ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಬಿಸಿಸಿಐ ಶಮಿಯ ಕೇಂದ್ರಿಯ ಗುತ್ತಿಗೆಯನ್ನು ತಡೆ ಹಿಡಿದಿದೆ. ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡುವುದೂ ಅನುಮಾನ ಎನ್ನಲಾಗಿದೆ. ಈ ಬಾರಿಯ ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌, ಶಮಿ ಅವರನ್ನು ಖರೀದಿಸಿತ್ತು.

‘ಶಮಿ ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ ಆಡಿಸಬೇಕೊಬೇಡವೊ ಎಂಬುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಂಡಳಿ ತೀರ್ಮಾನಕ್ಕೆ ಕಾಯುತ್ತಿದ್ದೇವೆ’ ಎಂದು ಡೇರ್‌ಡೆವಿಲ್ಸ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಮಂತ್‌ ದುವಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry