ಫೆನ್ಸಿಂಗ್‌: ತ್ಯಾಗರಾಜಗೆ ಚಿನ್ನ

7

ಫೆನ್ಸಿಂಗ್‌: ತ್ಯಾಗರಾಜಗೆ ಚಿನ್ನ

Published:
Updated:

ಬೆಂಗಳೂರು: ಕರ್ನಾಟಕದ ತ್ಯಾಗರಾಜ್ ಮಣಿಪುರದ ಇಂಪಾಲದಲ್ಲಿ ನಡೆಯುತ್ತಿರುವ 11ನೇ ರಾಷ್ಟ್ರೀಯ ವ್ಹೀಲ್‌ ಚೇರ್‌ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕ ಗೆದ್ದರು. ಇದರೊಂದಿಗೆ  ಸ್ಪರ್ಧಿಸಿದ ಮೂರೂ ವಿಭಾಗಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದರು.

‘ಬಿ’ ಕೆಟಗರಿ ಫಾಯಿಲ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ತ್ಯಾಗರಾಜ ಅವರು ಹರಿಯಾಣದ ಸ್ಪರ್ಧಿ ದೇವೇಂದರ್ ಎದುರು ಗೆದ್ದರು. ಸೆಬರ್ ವಿಭಾಗದಲ್ಲಿ ಮಣಿಪುರದ ಎಂ.ಡಿ ರಿಯಾಜ್ ಎದುರು ಸೋತು ಬೆಳ್ಳಿ ಪಡೆದರು. ಇಪೀ ವಿಭಾಗದಲ್ಲಿ ಕೂಡ ಅವರು ಕಂಚಿನ ಪದಕ ಗೆದ್ದರು.

ವೆಂಕಟೇಶ್‌ಬಾಬುಗೆ ಎರಡು ಪದಕ: ಎನ್‌.ವೆಂಕಟೇಶ್ ಬಾಬು ‘ಎ’ ಕೆಟಗರಿ ಇಪೀ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು 9–10ರಿಂದ ಮಣಿಪುರದ ಸೊಹೊಬೆಬಾ ಎದುರು ಸೋತರು. ಫಾಯಿಲ್‌ ವಿಭಾಗದಲ್ಲಿ 9–10ರಿಂದ ಒಡಿಶಾದ ರಾಕೆಲ್ ಶೆಟ್ಟಿ ಎದುರು ಸೋತು ಕಂಚು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry