ಕಡೆಗಣನೆ ಏಕೆ?

7

ಕಡೆಗಣನೆ ಏಕೆ?

Published:
Updated:

ದೇಶೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಕರ್ನಾಟಕ ತಂಡದ ಪರ ಆಡುವ ಮಯಂಕ್ ಅಗರವಾಲ್, ಹೆಚ್ಚು ರನ್ ಕಲೆ ಹಾಕುತ್ತಿರುವ ಪ್ರತಿಭಾವಂತ ಆಟಗಾರ.

ಟೂರ್ನಿಗಳಲ್ಲಿ ಇವರು ಸಾವಿರಕ್ಕೂ ಹೆಚ್ಚು ರನ್‍ ಕಲೆಹಾಕುತ್ತಿದ್ದರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿರುವುದು ಬೇಸರದ ವಿಚಾರ. ಕೆಲವು ಆಟಗಾರರು ಫಾರ್ಮ್ ಕಳೆದು

ಕೊಂಡರೂ ಮತ್ತೆ ಮತ್ತೆ ಅವರಿಗೆ ಅವಕಾಶ ನೀಡಲಾಗುತ್ತದೆ. ಮಯಂಕ್‌ ಅವರಂಥ ಆಟಗಾರರು ಫಾರ್ಮ್‌ನಲ್ಲಿ ಇದ್ದರೂ ಆಯ್ಕೆಗಾರರ ಕಣ್ಣಿಗೆ ಬೀಳುತ್ತಿಲ್ಲ ಏಕೆ?

ಈಚಿನ ದಶಕದಲ್ಲಿ ರಾಜ್ಯದ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿದ್ದು ವಿರಳ. ಸಾಮರ್ಥ್ಯ, ಅರ್ಹತೆಗಳಿದ್ದರೂ ಕನ್ನಡಿಗರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸದಿರುವ ಬಿಸಿಸಿಐ, ತನ್ನ ತಾತ್ಸಾರ ಮನೋಭಾವ ಬಿಡಬೇಕು. ಅರ್ಹರಿಗೆ ಅವಕಾಶ ಕೊಟ್ಟು ಹುರಿದುಂಬಿಸಬೇಕು.

ಬೆನಕಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry