ವಸತಿಶಾಲೆಗಳಲ್ಲಿ ವಿಜ್ಞಾನ ಪಿ.ಯು. ಶಿಕ್ಷಣ: ಆಂಜನೇಯ

7

ವಸತಿಶಾಲೆಗಳಲ್ಲಿ ವಿಜ್ಞಾನ ಪಿ.ಯು. ಶಿಕ್ಷಣ: ಆಂಜನೇಯ

Published:
Updated:
ವಸತಿಶಾಲೆಗಳಲ್ಲಿ ವಿಜ್ಞಾನ ಪಿ.ಯು. ಶಿಕ್ಷಣ: ಆಂಜನೇಯ

ಚಿತ್ರದುರ್ಗ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ರಾಜ್ಯದಲ್ಲಿರುವ 818 ವಸತಿಶಾಲೆಗಳಲ್ಲಿ ಮುಂದಿನ ವರ್ಷದಿಂದ ವಿಜ್ಞಾನ ವಿಷಯದ ಪಿ.ಯು. ಕಾಲೇಜು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.

ಭಾನುವಾರ ತಾಲ್ಲೂಕಿನ ಬಹದ್ದೂರಘಟ್ಟದಲ್ಲಿ ₹ 14.80 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ಹೈಟೆಕ್ ವಸತಿ ಶಾಲಾ ಸಮುಚ್ಚಯ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಕೂಡ ಇಂಥ ಶಾಲೆಗಳನ್ನು ದೇಶದಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಬೇಕಾದರೆ, ಬಿಜೆಪಿಯ ಯಾವುದೇ ಮುಖಂಡರು ಬಂದು ನಮ್ಮ ಶಾಲೆಗಳನ್ನು ನೋಡಬಹುದು’ ಎಂದು ಸವಾಲು ಹಾಕಿದರು.

‘ರಾಜ್ಯದಲ್ಲಿ ಇದುವರೆಗೆ 212 ವಸತಿಶಾಲೆ ನಿರ್ಮಾಣ ಮಾಡಿದ್ದೇವೆ. ನಮ್ಮ ಇಲಾಖೆಯ ಶಾಲೆಗಳು ಸ್ಟಾರ್ ಹೋಟೆಲ್‌ಗಳಂತೆ ಕಾಣುತ್ತವೆ. ಕಟ್ಟಡ ಮಾತ್ರವಲ್ಲ, ಶಿಕ್ಷಣದ ಗುಣಮಟ್ಟವನ್ನೂ ಕಾಯ್ದುಕೊಂಡಿದ್ದೇವೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡುತ್ತಾ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry