ಬೆಳಗಾವಿ: ದೇಶದ ಅತಿ ಎತ್ತರದ ಧ್ಚಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟ

ಬುಧವಾರ, ಮಾರ್ಚ್ 20, 2019
23 °C

ಬೆಳಗಾವಿ: ದೇಶದ ಅತಿ ಎತ್ತರದ ಧ್ಚಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟ

Published:
Updated:
ಬೆಳಗಾವಿ: ದೇಶದ ಅತಿ ಎತ್ತರದ ಧ್ಚಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟ

ಬೆಳಗಾವಿ: ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಿರುವ ದೇಶದ ಅತಿ ಎತ್ತರದ್ದು ಎನ್ನಲಾದ (110 ಮೀಟರ್) ಧ್ಚಜಸ್ತಂಭದಲ್ಲಿ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಕ್ಷಣಕ್ಕೆ ಸಾವಿರಾರು ಮಂದಿ ನಾಗರಿಕರು, ನಗರದ ಧರ್ಮಗುರುಗಳು, ಗಣ್ಯರು, ಅಧಿಕಾರಿಗಳು ಸಾಕ್ಷಿಯಾದರು. ಮರಾಠಾ ಲಘು ಪದಾತಿದಳದ ಬ್ಯಾಂಡ್‌ನವರು ದೇಶಭಕ್ತಿ ಗೀತೆ ನುಡಿಸುವ‌ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ರಮೇಶ ಜಾರಕಿಹೊಳಿ ಮಾತನಾಡಿ, ‘ದೇಶದ ಅತಿ ಎತ್ತರದ ಧ್ವಜಸ್ತಂಭವನ್ನು ನಗರ, ರಾಜ್ಯ ಹಾಗೂ ದೇಶಕ್ಕೆ ಸಮರ್ಪಿಸುವುದಕ್ಕೆ ಹೆಮ್ಮೆಯಾಗುತ್ತದೆ. ದೇಶ ಯಾರೋ ಒಬ್ಬರದಲ್ಲ. ಎಲ್ಲರ ದೇಶ. ಎಲ್ಲರೂ ಅಣ್ಣ ತಮ್ಮಂದಿರಂತೆ ಸೌಹಾರ್ದದಿಂದ ಇರಬೇಕು. ಆಗ ರಾಮರಾಜ್ಯ ಸ್ಥಾಪನೆ ಸಾಧ್ಯ’ ಎಂದರು.

‘ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಧಾನವನ್ನು ಬಿಡುಗಡೆಗೊಳಿಸಿ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು’ ಎಂದರು.

ಶಾಸಕ ಫಿರೋಜ್ ಸೇಠ್ ಮಾತನಾಡಿ, ‘ದೇಶ ಹಾಗೂ ತ್ರಿವರ್ಣ ಧ್ವಜ ಎರಡು ಒಂದೇ. ಎಲ್ಲರೂ ಸಮಾನರು’ ಎಂದರು.

ಇದನ್ನೂ ಓದಿ...

110 ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry