ಸೌತ್‌ ಯುನೈಟೆಡ್‌ ತಂಡಕ್ಕೆ ಗೆಲುವು

7

ಸೌತ್‌ ಯುನೈಟೆಡ್‌ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಲೋಕೇಶ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಸೌತ್‌ ಯುನೈಟೆಡ್‌ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ವತಿಯ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗ ಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸೌತ್‌ ಯುನೈಟೆಡ್‌ 5–0 ಗೋಲುಗಳಿಂದ ಎಫ್‌ಸಿ ಡೆಕ್ಕನ್ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಸೌತ್‌ ಯುನೈಟೆಡ್‌ ತಂಡಕ್ಕೆ 39ನೇ ನಿಮಿಷದಲ್ಲಿ ಜಾನ್‌ ಮುನ್ನಡೆ ತಂದುಕೊಟ್ಟರು.

41 ಮತ್ತು 54ನೇ ನಿಮಿಷಗಳಲ್ಲಿ ಲೋಕೇಶ್‌ ಚೆಂಡನ್ನು ಗುರಿ ಮುಟ್ಟಿಸಿ 3–0ರ ಮುನ್ನಡೆಗೆ ಕಾರಣರಾದರು. ನಿಖಿಲ್‌ (69ನೇ ನಿ.) ಮತ್ತು ಶೈಲೇಶ್ (73ನೇ ನಿ.) ತಲಾ ಒಂದು ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಎಂಇಜಿ 4–2 ಗೋಲುಗಳಿಂದ ಸ್ಟೂಡೆಂಟ್ಸ್‌ ಯೂನಿಯನ್‌ ತಂಡವನ್ನು ಮಣಿಸಿತು.

ಮುಜೀಬ್‌ 15ನೇ ನಿಮಿಷದಲ್ಲಿ ಗೋಲು ಬಾರಿಸಿ ಎಂಇಜಿ ತಂಡದ ಖಾತೆ ತೆರೆದರು. 22ನೇ ನಿಮಿಷದಲ್ಲಿ ಸ್ಟೂಡೆಂಟ್‌ ಯೂನಿಯನ್‌ ತಂಡದ ಮಯೋಕ್‌ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಪಂದ್ಯದಲ್ಲಿ 1–1ರ ಸಮಬಲ ಕಂಡುಬಂತು.

32ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದ ರಾಮು 2–1ರ ಮುನ್ನಡೆಗೆ ಕಾರಣರಾದರು. 52ನೇ ನಿಮಿಷದಲ್ಲಿ ಅಮೋಸ್‌ ಗೋಲು ದಾಖಲಿಸಿದ್ದರಿಂದ ಸ್ಟೂಡೆಂಟ್ಸ್‌ ಯೂನಿಯನ್‌ ತಂಡ 2–2ರಲ್ಲಿ ಸಮಬಲ ಸಾಧಿಸಿತು.

ಆ ನಂತರ ಎಂಇಜಿ ಗುಣಮಟ್ಟದ ಆಟ ಆಡಿತು. ಈ ತಂಡದ ಲಿಟನ್‌ ಶಿಲ್‌ 84 ನೇ ನಿಮಿಷದಲ್ಲಿ ಗೋಲು ಹೊಡೆದರು. 89ನೇ ನಿಮಿಷದಲ್ಲೂ ಮೋಡಿ ಮಾಡಿದ ಅವರು ಎಂಇಜಿ ಸಂಭ್ರಮಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry