ಬೆಂಕಿ ಆಕಸ್ಮಿಕ: ಹುಲ್ಲಿನ ಬಣವೆ ಭಸ್ಮ

7

ಬೆಂಕಿ ಆಕಸ್ಮಿಕ: ಹುಲ್ಲಿನ ಬಣವೆ ಭಸ್ಮ

Published:
Updated:

ಸೊರಬ: ತಾಲ್ಲೂಕಿನ ಜಂಗಿನಕೊಪ್ಪ ಗ್ರಾಮದ ಸಮೀಪ ಭತ್ತದ ಬಣವೆಗೆ ಭಾನುವಾರ ರಾತ್ರಿ ಬೆಂಕಿ ತಗುಲಿ ಭತ್ತದ ಹುಲ್ಲು ಸುಟ್ಟುಹೋಗಿದೆ.

ತಾಲ್ಲೂಕಿನ ಹಳೇಸೊರಬ ಗ್ರಾಮದ ವ್ಯಾಪ್ತಿಗೆ ಒಳಪಟ್ಟ ಸರ್ವೆ ನಂಬರ್‌ 23ರಲ್ಲಿ ಮಂಜುನಾಥ್ ಮತ್ತು ಸರ್ವೆ ನಂಬರ್‌ 24ರಲ್ಲಿ ರೇಣುಕಮ್ಮ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ರಾಶಿ ಹಾಕಲಾಗಿದ್ದ ಒಣ ಹುಲ್ಲಿನ ಬಣಬೆಗೆ ಭಾನುವಾರ ರಾತ್ರಿ ಬೆಂಕಿ ತಗುಲಿರುವುದರಿಂದ ಸುಮಾರು ₹ 45 ಸಾವಿರ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಜಮೀನನಲ್ಲಿ ಜೋಳದ ಬೆಳೆ ಬೆಳೆಯಲಾಗಿದ್ದು, ಹುಲ್ಲಿನ ರಾಶಿ ಪಕ್ಕದಲ್ಲಿ ಜೋಳಕ್ಕೆ ಹಾಕಲು ಗೊಬ್ಬರ ಚೀಲವನ್ನು ಇಡಲಾಗಿತ್ತು. ಬೆಂಕಿಯ ಜ್ವಾಲೆಗೆ ₹ 4,500 ಮೌಲ್ಯದ 10 ಚೀಲ ಯೂರಿಯ ಗೊಬ್ಬರ ಸುಟ್ಟುಹೋಗಿದೆ ಎಂದು ಜಮೀನಿನ ಮಾಲೀಕ ಮಂಜುನಾಥ್ ತಿಳಿಸಿದರು.

ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry