‘ಟೊಮೆಟೊ ಜ್ಯೂಸ್‌ ನನ್ನ ಮೊದಲ ಅಡುಗೆ’

7

‘ಟೊಮೆಟೊ ಜ್ಯೂಸ್‌ ನನ್ನ ಮೊದಲ ಅಡುಗೆ’

Published:
Updated:
‘ಟೊಮೆಟೊ ಜ್ಯೂಸ್‌ ನನ್ನ ಮೊದಲ ಅಡುಗೆ’

ನನಗೆ ರುಚಿರುಚಿಯಾಗಿ ಅಡುಗೆ ಮಾಡಿಕೊಂಡು ತಿನ್ನುವುದು ತುಂಬಾ ಇಷ್ಟ. ಅಮ್ಮನ ಮುದ್ದಿನ ಮಗ ನಾನು. ಹೀಗಾಗಿ ಅಮ್ಮನಿಗೆ ಹೇಳಿ ಬೇಕಾದ ಅಡುಗೆ ಮಾಡಿಸಿಕೊಂಡು ತಿನ್ನುತ್ತೇನೆ. ಅಮ್ಮ ಮನೆಯಲ್ಲಿ ಇಲ್ಲ ಅಥವಾ ತೀರಾ ಅಗತ್ಯ ಇದ್ದಾಗ ಮಾತ್ರ ನಾನು ಅಡುಗೆ ಮನೆಗೆ ಹೋಗಿ, ಏನಾದರೂ ಹೊಸ ಪ್ರಯೋಗ ಮಾಡುವುದುಂಟು. ಆದರೆ ಅಂಥ ಪ್ರಸಂಗಗಳು ತೀರಾ ಕಡಿಮೆ.

ನನಗೆ ಸಣ್ಣವಯಸ್ಸಿನಲ್ಲಿ ಅಡುಗೆ ಬಗ್ಗೆ ಕ್ರೇಜ್‌ ಇತ್ತು. ಅಮ್ಮ ಅಡುಗೆ ಮಾಡುವಾಗ ನೋಡುತ್ತಿದ್ದೆ. ಆದರೆ ಪ್ರಯೋಗಕ್ಕೆ ನಾನು ಯಾವತ್ತೂ ಹೊರಟಿರಲಿಲ್ಲ. ಸಲಾಡ್‌, ಜ್ಯೂಸ್‌ ಮಾಡಿಕೊಂಡು ಕುಡಿತೀನಿ. ನಾನು ಹೈಸ್ಕೂಲಿನಲ್ಲಿದ್ದಾಗ ಟೊಮೆಟೊ ಹಾಗೂ ಸಕ್ಕರೆ ಸೇರಿಸಿಕೊಂಡು ಜ್ಯೂಸ್‌ ಮಾಡಿಕೊಂಡು ಕುಡಿಯುತ್ತಿದ್ದೆ. ನನಗೆ ನೆನಪಿರುವ ಹಾಗೇ ಇದೇ ನನ್ನ ಮೊದಲ ಅಡುಗೆ ಪ್ರಯೋಗ. ಈಗ ಶೂಟಿಂಗ್‌ ಮಧ್ಯದಲ್ಲಿ ಅಮ್ಮನ ಕೈರುಚಿಯೇ ನನಗಿಷ್ಟ.

ನಾನು ಮಾಂಸಾಹಾರ ಪ್ರಿಯ. ವಾರದಲ್ಲಿ ಸೋಮವಾರ ಬಿಟ್ಟು ಎಲ್ಲಾ ದಿನ ಚಿಕನ್‌ ಖಾದ್ಯಗಳನ್ನು ತಿನ್ನುತ್ತೇನೆ. ನಮ್ಮ ಕ್ಷೇತ್ರದಲ್ಲಿ ಫಿಟ್‌ ಆಗಿರುವುದು ಮುಖ್ಯ. ಹಾಗಾಗಿ ಡಯೆಟ್‌ ಆಹಾರಗಳನ್ನೇ ಸೇವಿಸುತ್ತೇನೆ. ನಾನು ಡಯೆಟ್‌ನಲ್ಲಿರುವುದರಿಂದ ಆಗಾಗ ‘ಚಿಕನ್‌ ಡಯೆಟ್‌’ ಮಾಡುತ್ತೇನೆ. ಅದನ್ನೇ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.

ಚಿಕನ್‌ ಡಯೆಟ್‌ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಅರ್ಧ ಕೆ.ಜಿ ಚಿಕನ್‌, ಉಪ್ಪು, ಕಾಳುಮೆಣಸಿನ ಪುಡಿ, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌, ಬ್ರೊಕೋಲಿ, ಬೀನ್ಸ್‌

ಮಾಡುವ ವಿಧಾನ: ಅರ್ಧ ಕೆ.ಜಿ. ಚಿಕನ್‌ ಮಾಂಸವನ್ನು ಚೆನ್ನಾಗಿ ತೊಳೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ನಂತರ ಕಾಳುಮೆಣಸಿನ ಪುಡಿ, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಚೆನ್ನಾಗಿ ಕುದಿಸಬೇಕು. ಇನ್ನೊಂದು ಪಾತ್ರದಲ್ಲಿ ಬ್ರೊಕೊಲಿಯನ್ನು ದೊಡ್ಡದಾಗಿ ಕತ್ತರಿಸಿ, ಅದಕ್ಕೆ ಸಣ್ಣದಾಗಿ ಕತ್ತರಿಸಿದ ಬೀನ್ಸ್‌ ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಖಾರದ ಪುಡಿ ಹಾಕಿ ಬೇಯಿಸಬೇಕು. ನಂತರ ಎರಡೂ ಮಿಶ್ರಣವನ್ನು ಒಂದಕ್ಕೊಂದು ಸೇರಿಸಿ ತಿನ್ನಬೇಕು. ಇದು ಡಯೆಟ್‌ನಲ್ಲಿರುವವರಿಗೆ ಇಷ್ಟವಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry