ಜಯಾ ಬಚ್ಚನ್ ಆಸ್ತಿ ಮೌಲ್ಯ ₹1,000 ಕೋಟಿ

7

ಜಯಾ ಬಚ್ಚನ್ ಆಸ್ತಿ ಮೌಲ್ಯ ₹1,000 ಕೋಟಿ

Published:
Updated:
ಜಯಾ ಬಚ್ಚನ್ ಆಸ್ತಿ ಮೌಲ್ಯ ₹1,000 ಕೋಟಿ

ಲಖನೌ: ಜಯಾ ಬಚ್ಚನ್ ಅವರ ಆಸ್ತಿ ಮೌಲ್ಯ 6 ವರ್ಷಗಳಲ್ಲಿ ದುಪ್ಪಟ್ಟಿಗಿಂತ ಹೆಚ್ಚಳವಾಗಿದ್ದು ₹1,000 ಕೋಟಿ ಆಸ್ತಿ ಹೊಂದಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ, ತಾವು ಹಾಗೂ ತಮ್ಮ ಪತಿ ಅಮಿತಾಭ್‌ ಬಚ್ಚನ್ ₹1000 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. 2012ರ ಅಫಿಡವಿಟ್‌ ಪ್ರಕಾರ ಜಯಾ ₹343 ಕೋಟಿ ಆಸ್ತಿ ಹೊಂದಿದ್ದರು.

ಜಯಾ ₹460 ಕೋಟಿಗೂ ಹೆಚ್ಚು ಸ್ಥಿರಾಸ್ತಿ, ₹540 ಕೋಟಿ ಚರಾಸ್ತಿ ಹೊಂದಿದ್ದು, ₹9 ಲಕ್ಷಕ್ಕೂ ಹೆಚ್ಚು ಮೌಲ್ಯದ ಪೆನ್‌ಗಳು, ₹51 ಲಕ್ಷ ಮೌಲ್ಯದ ವಾಚ್‌ಗಳು ಇದರಲ್ಲಿ ಸೇರಿವೆ. ಭೋಪಾಲ, ನೊಯಿಡಾ, ದೆಹಲಿ, ಪುಣೆ ಹಾಗೂ ಮುಂಬೈ ಹೊರತಾಗಿ ದಂಪತಿ ಫ್ರಾನ್ಸ್‌ನಲ್ಲಿ ₹3175 ಚ.ಮೀ. ವಿಸ್ತೀರ್ಣದ ವಸತಿ ನಿವೇಶನ ಹೊಂದಿದ್ದಾರೆ.

ಅಮಿತಾಭ್‌ ಬಚ್ಚನ್ ಅವರು ಬಾರಾಬಂಕಿ ಜಿಲ್ಲೆಯ ದೌಲತ್‌ಪುರದಲ್ಲಿ ₹5.7 ಕೋಟಿ ಮೌಲ್ಯದ 3 ಎಕರೆ ಪ್ಲಾಟ್, ಜಯಾ ಅವರು ಲಖನೌನ ಕಾಕೋರಿ ಪ್ರದೇಶದಲ್ಲಿ ₹2.2 ಕೋಟಿ ಮೌಲ್ಯದ 1.22 ಹೆಕ್ಟೇರ್ ಕೃಷಿ ಭೂಮಿ ಹೊಂದಿದ್ದಾರೆ.

ಮೂರು ಬಾರಿ ರಾಜ್ಯಸಭೆ ಸದಸ್ಯೆಯಾಗಿದ್ದ ಜಯಾ ನಾಲ್ಕನೇ ಬಾರಿಗೆ ರಾಜ್ಯಸಭೆ ಸದಸ್ಯ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry