ರಾಜೀವ್ ಗಾಂಧಿ ವಿ.ವಿ ಸ್ಥಳಾಂತರಕ್ಕೆ ತಡೆ

ಮಂಗಳವಾರ, ಮಾರ್ಚ್ 26, 2019
22 °C

ರಾಜೀವ್ ಗಾಂಧಿ ವಿ.ವಿ ಸ್ಥಳಾಂತರಕ್ಕೆ ತಡೆ

Published:
Updated:
ರಾಜೀವ್ ಗಾಂಧಿ ವಿ.ವಿ ಸ್ಥಳಾಂತರಕ್ಕೆ ತಡೆ

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವನ್ನು ಬೆಂಗಳೂರಿನಿಂದ ರಾಮನಗರ ಜಿಲ್ಲಾ ಕಂದಾಯ ಭವನಕ್ಕೆ ಸ್ಥಳಾಂತರ ಮಾಡುತ್ತಿರುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಿದ್ದ ಲಕ್ಷ್ಮೀ ಅಯ್ಯಂಗಾರ್, ‘ವಿ.ವಿಯನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ಹಿಂದೆ ರಾಜಕೀಯ ಉದ್ದೇಶ ಅಡಗಿದೆ. ಈ ಸ್ಥಳಾಂತರದಿಂದ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ಕಾಲೇಜುಗಳ ಆಡಳಿತ ಪ್ರಕ್ರಿಯೆಗಳಿಗೆ ಅಡಚಣೆಯಾಗುತ್ತದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

‘ಆರ್‌ಜಿಯುಎಚ್‌ಎಸ್‌ ಕಾಯ್ದೆ–1994 ಕಲಂ 3 (4)ರ ಅನುಸಾರ ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ವಿದ್ಯಾಲಯದ ಕ್ಯಾಂಪಸ್ ಅನ್ನು ಕೇಂದ್ರ ಕಚೇರಿಯಾಗಿ ಹೆಚ್ಚುವರಿಯಾಗಿ ಉಳಿಸಿಕೊಂಡು ಮುಂದುವರಿಸಲು ನಿರ್ದೇಶಿಸಬೇಕು’ ಎಂದೂ ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಸ್ಥಳಾಂತರ ಹಾಗೂ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶಿಸಿದೆ.

ವಿಚಾರಣೆಯನ್ನು ಜೂನ್‌ 4ಕ್ಕೆ ಮುಂದೂಡಲಾಗಿದೆ.

ಮಂಗಳೂರು, ಕಲಬುರ್ಗಿ, ಧಾರವಾಡ ಬೆಳಗಾವಿ, ಶಿವಮೊಗ್ಗ, ಬಾಗಲಕೋಟೆ, ಚಿತ್ರದುರ್ಗ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆಯ ಆಯುರ್ವೇದ, ನರ್ಸಿಂಗ್, ದಂತವೈದ್ಯ, ಫಾರ್ಮಸಿ ಹಾಗೂ ಇತರೆ ಅರೆ ವೈದ್ಯಕೀಯ ಕಾಲೇಜುಗಳ ಒಟ್ಟು 28 ಪ್ರಾಂಶುಪಾಲರು ಈ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry