ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರಿಗೆ ತಾಲ್ಲೂಕು ಭಾಗ್ಯ

ತಾತ್ಕಾಲಿಕವಾಗಿ ತಹಶೀಲ್ದಾರ್ ಕಚೇರಿ ಕಾರ್ಯಾರಂಭ, ಉದ್ಘಾಟನೆ ಇಂದು
Last Updated 15 ಮಾರ್ಚ್ 2018, 6:36 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹುಲಸೂರ ಹೊಸ ತಾಲ್ಲೂಕಿನ ಉದ್ಘಾಟನಾ ಸಮಾರಂಭ ಮಾ. 15 ರಂದು ನಡೆಯಲಿದ್ದು ಈ ಭಾಗದವರ ಬಹುದಿನಗಳ ಕನಸು ನನಸಾಗಲಿದೆ.

ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟನೆ ನೆರವೇರಿಸುವರು. ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಮುಂತಾದವರು ಪಾಲ್ಗೊಳ್ಳುವರು.

ಹುಲಸೂರ, ಮಿರಖಲ್, ತೊಗಲೂರ, ಗೋರಟಾ (ಬಿ), ಗಡಿಗೌಡಗಾಂವ, ಮುಚಳಂಬ, ಬೇಲೂರ,ಸೋಲದಾಬಕಾ, ದೇವನಾಳ, ಕಾದರಾಬಾದ, ಹಾಲಹಳ್ಳಿ, ಗುತ್ತಿ, ಮುಸ್ತಾಪುರ, ಲಿಂಬಾಪುರ, ಗಡಿರಾಯಪಳ್ಳಿ, ಕಾದೆಪುರ. ಕೋಟಮಾಳ, ಮಾಚನಾಳ ಸೇರಿ 18 ಗ್ರಾಮಗಳನ್ನು ಒಳಗೊಂಡ ಹೊಸ ತಾಲ್ಲೂಕನ್ನು ರಚಿಸಲಾಗಿದೆ.

ಹುಲಸೂರ ಗ್ರಾಮದಲ್ಲಿ 15 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. 2003 ರವರೆಗೆ ಇದು ಮೀಸಲು ವಿಧಾನಸಭಾ ಕ್ಷೇತ್ರದ ಕೇಂದ್ರವಾಗಿತ್ತು. ಇದನ್ನು ಹೊಸ ತಾಲ್ಲೂಕುವನ್ನಾಗಿ ಘೋಷಿಸಬೇಕು ಎಂಬುದು ಈ ಭಾಗದವರ ಬಹುದಿನದ ಬೇಡಿಕೆಯಾಗಿತ್ತು.

‘ಹೊಸ ತಾಲ್ಲೂಕು ರಚನೆಗೆ 10 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗಿದೆ. ಆದರೂ, ಎಂ.ಬಿ.ಪ್ರಕಾಶ ಸಮಿತಿಯ ವರದಿಯಲ್ಲಿ ಸೂಚಿಸಿರುವ ಗ್ರಾಮಗಳನ್ನು ಈ ತಾಲ್ಲೂಕಿಗೆ ಸೇರ್ಪಡೆ ಮಾಡಲಾಗಿಲ್ಲ. ಒಂದೇ ಹೋಬಳಿಯ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದರಿಂದ ಅತಿ ಚಿಕ್ಕ ತಾಲ್ಲೂಕು ಇದಾಗಲಿದೆ’ ಎಂದು ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಹೇಳುತ್ತಾರೆ.

‘ಹೊಸ ತಾಲ್ಲೂಕಿಗೆ ಭಾಲ್ಕಿ ತಾಲ್ಲೂಕಿನ ಗ್ರಾಮಗಳನ್ನು ಕೂಡ ಸೇರ್ಪಡೆ ಮಾಡಬೇಕು. ಇದರಿಂದ ಹುಲಸೂರ ಸಮೀಪದ ಗ್ರಾಮಗಳ ಜನರಿಗೆ ಅನುಕೂಲ ಆಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ ಒತ್ತಾಯಿಸುತ್ತಾರೆ.

‘ವಿವಿಧ ಇಲಾಖೆಗಳ ಕಚೇರಿಗಳನ್ನು ಗ್ರಾಮದಲ್ಲಿಯೇ ಆರಂಭಿಸಬೇಕು. ಇದಕ್ಕಾಗಿ ಗ್ರಾಮಸ್ಥರು ಸ್ಥಳವನ್ನು ಒದಗಿಸುವ ಅಗತ್ಯವಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಸವರಾಜ ಕವಟೆ ಅಭಿಪ್ರಾಯಪಡುತ್ತಾರೆ.

‘ವಿಳಂಬವಾದರೂ ಹುಲಸೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿ ಸರ್ಕಾರ ಉತ್ತಮ ನಿರ್ಣಯ ತೆಗೆದು
ಕೊಂಡಿದೆ. ಇದರಿಂದ ಈ ಭಾಗದವರಿಗೆ ಸಂತಸವಾಗಿದೆ’ ಎಂದು ಲೋಕೇಶ ಧರ್ಮಣೆ ಹೇಳಿದರು.

‘ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಮಾತ್ರ ಆರಂಭಿಸಲಾಗುತ್ತಿದೆ. ಇತರೆ ಕಚೇರಿಗಳನ್ನು ನಂತರದಲ್ಲಿ ಆರಂಭಿಸ
ಲಾಗುತ್ತದೆ’ ಎಂದು ತಹಶೀಲ್ದಾರ್ ಜಗನ್ನಾಥರೆಡ್ಡಿ ತಿಳಿಸಿದ್ದಾರೆ.
-ಮಾಣಿಕ ಆರ್.ಭುರೆ

*
ಹೊಸ ತಾಲ್ಲೂಕಿನ ಆರಂಭೋತ್ಸವ ಕೇವಲ ಕಾಟಾಚಾರಕ್ಕೆ ನಡೆಯಬಾರದು. ಶೀಘ್ರದಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನು ಆರಂಭಿಸಬೇಕು.
-ಎಂ.ಜಿ.ರಾಜೋಳೆ ಅಧ್ಯಕ್ಷ, ತಾಲ್ಲೂಕು ರಚನೆ ಹೋರಾಟ ಸಮಿತಿ

*
ಭಾಲ್ಕಿ ತಾಲ್ಲೂಕಿನ ಮೆಹಕರ್ ವೃತ್ತದಲ್ಲಿನ ಗ್ರಾಮಗಳು ಹುಲಸೂರಗೆ ಹತ್ತಿಕೊಂಡಿದ್ದು ಅವುಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು.
-ಸುಧೀರ ಕಾಡಾದಿ, ಜಿ.ಪಂ. ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT