ಉಗ್ರರಿಗೆ ಗುಂಡು ಹಾರಿಸಿ ತಪ್ಪಿಸಿಕೊಂಡ!

7
ಅಪಹರಣ ಪ್ರಕರಣ ನಾಟಕೀಯ ತಿರುವು

ಉಗ್ರರಿಗೆ ಗುಂಡು ಹಾರಿಸಿ ತಪ್ಪಿಸಿಕೊಂಡ!

Published:
Updated:

ಕಾಬೂಲ್‌ : ಅಫ್ಗಾನಿಸ್ತಾನದ ವ್ಯಕ್ತಿಯೊಬ್ಬ ತನ್ನನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ತಾಲಿಬಾನ್‌ ಉಗ್ರರ ಬಳಿಯಿಂದ ಬಂದೂಕು ಕಸಿದುಕೊಂಡು ಅವರತ್ತ ಗುಂಡು ಹಾರಿಸಿ 7 ಜನರನ್ನು ಕೊಂದು ತಪ್ಪಿಸಿಕೊಂಡಿದ್ದಾನೆ.

ಪಕ್ತಿಕಾ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅವಲಾ ಖಾನ್‌ (36) ಮತ್ತು ಪೊಲೀಸ್‌ ಅಧಿಕಾರಿಯನ್ನು ಬುಧವಾರ ತಾಲಿಬಾನ್‌ ಉಗ್ರರು ಅಪಹರಿಸಿದ್ದರು. ಅಧಿಕಾರಿಯನ್ನು ಕೊಂದಿದ್ದ ಉಗ್ರರು ಗೊಮಲಾ ಜಿಲ್ಲೆಯಲ್ಲಿ ಅವಲಾನನ್ನು ಒಂದು ಗಂಟೆ ಒತ್ತೆಯಾಳಗಿಸಿಕೊಂಡಿದ್ದರು.

ಮಧ್ಯಾಹ್ನ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಬಳಿ ಇದ್ದ ಬಂದೂಕನ್ನು ಕಸಿದುಕೊಂಡ ಅವಲಾ ಖಾನ್‌  ಗುಂಡು ಹಾರಿಸಿದ್ದು

ತಪ್ಪಿಸಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry