ಟ್ವಿಟರ್‌ ಹ್ಯಾಂಡಲ್‌ ಬದಲಾಯಿಸಿದ ರಾಹುಲ್ ಗಾಂಧಿ

7

ಟ್ವಿಟರ್‌ ಹ್ಯಾಂಡಲ್‌ ಬದಲಾಯಿಸಿದ ರಾಹುಲ್ ಗಾಂಧಿ

Published:
Updated:
ಟ್ವಿಟರ್‌ ಹ್ಯಾಂಡಲ್‌ ಬದಲಾಯಿಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್‌ ಹ್ಯಾಂಡಲ್ ಅನ್ನು ಶನಿವಾರ ಬೆಳಿಗ್ಗೆ ಬದಲಾಯಿಸಲಾಗಿದೆ.

ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದ ಸಂದರ್ಭದಲ್ಲೇ ಹೊಸ ಟ್ವಿಟರ್‌ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ನನ್ನ ಟ್ವಿಟರ್ ಹ್ಯಾಂಡಲ್‌ ಅನ್ನು ಇವತ್ತು ಬೆಳಿಗ್ಗೆ 9 ಗಂಟೆಯಿಂದ @RahulGandhi ಎಂದು ಬದಲಾಯಿಸಲಾಗಿದೆ. @OfficeOfRG ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳನ್ನು ಎದುರುನೋಡುತ್ತಿದ್ದೇನೆ. ಟ್ವಿಟರ್ ಮತ್ತು ಇತರ ತಾಣಗಳಲ್ಲಿ ನನ್ನ ಸಂಭಾಷಣೆ ಮುಂದುವರಿಸಲಿದ್ದೇನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್‌ ಗಾಂಧಿ ಅವರು 2015ರಲ್ಲಿ ಟ್ವಿಟರ್ ಖಾತೆ ತೆರೆದಿದ್ದಾರೆ.

[Related]

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry