ಬಿಕಿನಿ ಬೇಡ, ಭಾರತದ ಸಂಸ್ಕೃತಿಗೆ ತಕ್ಕಂತೆ ಉಡುಗೆ ಧರಿಸಿ: ಪ್ರವಾಸಿಗರಿಗೆ ಸಚಿವರ ಸಲಹೆ

7

ಬಿಕಿನಿ ಬೇಡ, ಭಾರತದ ಸಂಸ್ಕೃತಿಗೆ ತಕ್ಕಂತೆ ಉಡುಗೆ ಧರಿಸಿ: ಪ್ರವಾಸಿಗರಿಗೆ ಸಚಿವರ ಸಲಹೆ

Published:
Updated:
ಬಿಕಿನಿ ಬೇಡ, ಭಾರತದ ಸಂಸ್ಕೃತಿಗೆ ತಕ್ಕಂತೆ ಉಡುಗೆ ಧರಿಸಿ: ಪ್ರವಾಸಿಗರಿಗೆ ಸಚಿವರ ಸಲಹೆ

ನವದೆಹಲಿ: ಉತ್ತರ ಭಾರತದ ಜನರು ಭೂಮಿಯಲ್ಲಿನ ಕಸ ಎಂದು ಗೋವಾ ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶಿ ಮತ್ತು ಸ್ವದೇಶದ ಪ್ರವಾಸಿಗರು ಪ್ರವಾಸ ಸ್ಥಳಗಳಲ್ಲಿ ಯಾವ ರೀತಿಯ ಉಡುಗೆ ಧರಿಸಬೇಕೆಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ ಅಲ್ಫೋನ್ಸ್ ಸಲಹೆ ನೀಡಿದ್ದಾರೆ. ಸಚಿವರು ಹೇಳಿರುವ ನಡವಳಿಕೆಯ ನಿಯಮಾವಳಿ ಪ್ರಕಾರ ಪ್ರವಾಸಿಗರು ಭಾರತದ ಸಂಸ್ಕೃತಿಗೆ ತಕ್ಕಂತೆ ಉಡುಗೆ ಧರಿಸಬೇಕು. ಬಿಕಿನಿ ಸಂಸ್ಕೃತಿಯನ್ನು ಖಂಡಿಸಿದ ಸಚಿವರು ವಿದೇಶಿಗರು ತುಂಡುಡುಗೆಯಲ್ಲಿ ಅಡ್ಡಾಡುವುದನ್ನು ಭಾರತೀಯರು ನಿರೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.

ಎನ್‍ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಲ್ಫೋನ್ಸ್, ವಿದೇಶದಲ್ಲಿ ಅಲ್ಲಿನ ಜನರು ಬಿಕಿನಿ ಧರಿಸಿ ರಸ್ತೆಗಳಲ್ಲಿ ಅಡ್ಡಾಡುತ್ತಾರೆ.  ಅವರು ಭಾರತಕ್ಕೆ ಬಂದಾಗ ಬಿಕಿನಿ ಧರಿಸಿಕೊಂಡೇ ಓಡಾಡುವುದನ್ನು ನೀವು ನಿರೀಕ್ಷಿಸುವುದಿಲ್ಲ. ಗೋವಾದ ಕಡಲ ಕಿನಾರೆಗಳಲ್ಲಿ ಮಾತ್ರ ಅವರು ಬಿಕಿನಿ ಧರಿಸುತ್ತಾರೆ. ಅವರು ಅದನ್ನೇ ತೊಟ್ಟು ರಸ್ತೆಗೆ ಬರುವುದಿಲ್ಲ. ಒಂದು ದೇಶಕ್ಕೆ ಹೋದಾಗ ಯಾವ ಸ್ಥಳದಲ್ಲಿ ಏನು ಉಡುಗೆ ತೊಡಬೇಕು ಎಂಬುದನ್ನು ಅರಿತು ವರ್ತಿಸಬೇಕು. ಎಲ್ಲ ಪ್ರವಾಸಿಗರು ಸ್ಥಳೀಯ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು.

ಲ್ಯಾಟಿನ್ ಅಮೆರಿಕದ ನಗರಗಳಲ್ಲಿ ಜನರು ಬಿಕಿನಿ ಧರಿಸಿ ತಿರುಗಾಡುತ್ತಾರೆ. ಅಲ್ಲಿ ಅದು ಸ್ವೀಕಾರಾರ್ಹ. ಅದರ ಬಗ್ಗೆ ನನಗೂ ಅಭ್ಯಂತರವಿಲ್ಲ. ಆದರೆ ಇಲ್ಲಿಗೆ ಬಂದಾಗ ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸಬೇಕು. ಭಾರತಕ್ಕೆ ಬಂದಾಗ ಸೀರೆ ಉಟ್ಟುಕೊಳ್ಳಿ ಎಂದು ನಾನು ಹೇಳುತ್ತಿಲ್ಲ. ಆದರೆ ಅಲ್ಲಿಗೆ ಹೊಂದುವಂತಹ ಉಡುಗೆಗಳನ್ನೇ ಧರಿಸಿ ಎಂದಿದ್ದಾರೆ ಸಚಿವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry