7

‘ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಡಿರುವ ಆರೋಪ ಆಧಾರ ರಹಿತ’

Published:
Updated:
‘ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಡಿರುವ ಆರೋಪ ಆಧಾರ ರಹಿತ’

ಲಖನೌ: ಉಗ್ರರು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ಬೆಂಬಲಿಸುವ ಬಗ್ಗೆ ತಮ್ಮ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮಾಡಿರುವ ಆರೋಪ ಆಧಾರ ರಹಿತ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದ್ದಾರೆ.

‘ಮಂಡಳಿಯ ಆರೋಪದಿಂದ ನನಗೆ ಆಘಾತವಾಗಿದೆ’ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರೆಹ್ಮಾನಿ ಅವರಿಗೆ ಇದೇ 12ರಂದು ಬರೆದ ಪತ್ರದಲ್ಲಿ ಗುರೂಜಿ ಹೇಳಿಕೊಂಡಿದ್ದಾರೆ.

‘ಯಾವುದೇ ಬಗೆಯ ಶಾಂತಿಭಂಗ ಎಲ್ಲೇ ನಡೆದಿದ್ದರೂ ನಾನು ಅದನ್ನು ಖಂಡಿಸಿದ್ದೇನೆ. ನನ್ನ 61 ವರ್ಷಗಳ ಬದುಕಿನದಲ್ಲಿ ಮಾತು ಅಥವಾ ಕೃತಿಯಿಂದ ನಾನು ಯಾರಿಗೂ ಕೇಡು ಬಯಸಿಲ್ಲ. 41 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಶಾಂತಿ, ಸೌಹಾರ್ದ ಮತ್ತು ಅಧ್ಯಾತ್ಮ ಉನ್ನತಿಗಾಗಿಯೇ ಶ್ರಮಿಸಿದ್ದೇನೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಭಾರತದ ಪರಿಸ್ಥಿತಿಯೂ ಸಿರಿಯಾದಂತೆಯೇ ಆಗಬಹುದು. ಮುಸ್ಲಿಮರು ಅಯೋಧ್ಯೆ ಮೇಲೆ ತಮ್ಮ ಹಕ್ಕು ಸಾಧಿಸುವುದನ್ನು ಬಿಟ್ಟುಕೊಡಬೇಕು ಎಂದು ರವಿಶಂಕರ ಗುರೂಜಿ ಹೇಳಿದ್ದಾರೆ. ಆದರೆ ಇದು ಮುಸ್ಲಿಮರು ಮತ್ತು ನ್ಯಾಯಾಲಯಗಳಿಗೆ ಒಡ್ಡುತ್ತಿರುವ ಬೆದರಿಕೆ. ಇದು ದೇಶದ ಒಳಿತಿಗೆ ಪೂರಕವಲ್ಲ’ ಎಂದು ರೆಹ್ಮಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry