ಇಂದಿನಿಂದ ಕರಗ ಶಕ್ತ್ಯೋತ್ಸವ

7

ಇಂದಿನಿಂದ ಕರಗ ಶಕ್ತ್ಯೋತ್ಸವ

Published:
Updated:

ಬೆಂಗಳೂರು: ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ‘ಕರಗ ಶಕ್ತ್ಯೋತ್ಸವ’ ಇದೇ 23ರಿಂದ ಏಪ್ರಿಲ್‌ 2ರವರೆಗೆ ನಡೆಯಲಿದೆ.

23ರಂದು ರಾತ್ರಿ 10ಕ್ಕೆ ರಥೋತ್ಸವ, 24ರಂದು ಮುಂಜಾನೆ 4ಕ್ಕೆ ಧ್ವಜಾರೋಹಣ ನಡೆಯಲಿದೆ. 28ರಂದು ಆರತಿ ಉತ್ಸವ ಹಾಗೂ ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ. 29ರಂದು ಮುಂಜಾನೆ 3ಕ್ಕೆ ಸಂಪಂಗಿ ಕೆರೆ ಅಂಗಳದ ಶಕ್ತಿ ಪೀಠದಲ್ಲಿ ಹಸಿಕರಗ ನಡೆಯಲಿದೆ. 31ರ ರಾತ್ರಿ 12ಕ್ಕೆ ಕರಗ ಶಕ್ತ್ಯೋತ್ಸವ ಹಾಗೂ ಮಹಾರಥೋತ್ಸವ ನಡೆಯಲಿದೆ. ಕರಗವನ್ನು ಎನ್‌. ಮನು ಅವರು ಹೊರಲಿದ್ದಾರೆ. ಏಪ್ರಿಲ್‌ 2ರವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ಮಹಾಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry