7

ಬಾಹ್ಯಬಂಧನ ಚಿಕಿತ್ಸೆ; ಸರಿಯಾದ ಕಾಲುಗಳು

Published:
Updated:
ಬಾಹ್ಯಬಂಧನ ಚಿಕಿತ್ಸೆ; ಸರಿಯಾದ ಕಾಲುಗಳು

ಮೈಸೂರು: ಚಿಕ್ಕಂದಿನಿಂದಲೇ ಡೊಂಕಾ ಗಿದ್ದ ಹುಣಸೂರಿನ ಹಿಂದಾಗುಡ್ಲು ಗ್ರಾಮದ ಮಹದೇವ ಅವರ ಎರಡೂ ಕಾಲುಗಳನ್ನು ಬೋಗಾದಿ ಮುಖ್ಯರಸ್ತೆಯ ವಾಗ್ದೇವಿನಗರದಲ್ಲಿನ ಮಾನಸ ಕೀಲುಮೂಳೆ ಆಸ್ಪತ್ರೆಯಲ್ಲಿ ಸರಿಪಡಿಸಲಾಗಿದೆ ಎಂದು ಕೆ.ಆರ್.ಆಸ್ಪತ್ರೆ ನಿವೃತ್ತ ವೈದ್ಯ ಟಿ.ಮಂಜುನಾಥ್ ಶ್ಲಾಘಿಸಿದರು.

ರಷ್ಯಾದ ಕೀಲುಮೂಳೆ ತಜ್ಞ ಇಲಿಜ ರೋವ್ ಪ್ರಚುರಪಡಿಸಿದ ವೃತ್ತಾಕಾರದ ಬಾಹ್ಯಬಂಧನ ಚಿಕಿತ್ಸೆ ನೀಡುವ ಮೂಲಕ 25 ವರ್ಷದ ಮಹದೇವ ಅವರನ್ನು ಗುಣಪಡಿಸಲಾಗಿದೆ. ಅವರೀಗ ದ್ವಿಚಕ್ರ ವಾಹನ ಚಾಲನೆ ಮಾಡಬಲ್ಲರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬಲ್ಲರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆಯ ವೈದ್ಯ ಎಸ್‌.ರಘುನಂದನ ಮಾತನಾಡಿ, ಮಹದೇವು ಅವರ ಬಲಗಾಲನ್ನು ಮೊದಲು ಚಿಕಿತ್ಸೆಗೆ ಒಳಪಡಿಸಿದಾಗ ಪರಿಕರಗಳ ಕೊರತೆ ಇತ್ತು. ಹೀಗಾಗಿ ಪೂರ್ಣಪ್ರಮಾಣದ ಯಶಸ್ಸು ಸಾಧ್ಯವಾಗಲಿಲ್ಲ. ಈಗ ಸಕಲ ಸಿದ್ಧತೆಯೊಂದಿಗೆ ಎಡಗಾಲಿಗೆ ಚಿಕಿತ್ಸೆ ನೀಡಿ ಯಶಸ್ಸು ಸಾಧಿಸಿದ್ದೇವೆ. ₹ 3 ಲಕ್ಷ ಖರ್ಚಾಗುತ್ತಿದ್ದ ಚಿಕಿತ್ಸೆಯನ್ನು ಕೇವಲ ₹ 60 ಸಾವಿರದಲ್ಲಿ ನೀಡಲಾಗಿದೆ ಎಂದರು.

ಮಾರ್ಚ್‌ 24ರಂದು ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಚಿತವಾಗಿ ಕೀಲುಮೂಳೆ ತಪಾಸಣೆ, ಎಕ್ಸ್‌ರೇ ಮಾಡಲಾಗುತ್ತಿದೆ. ಸಂಬಂಧ ಪಟ್ಟವರು ಹೆಸರು ನೋಂದಾಯಿಸಿಕೊ ಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ: 9902218877 ಸಂಪರ್ಕಿಸಬಹುದು ಎಂದು ಹೇಳಿದರು.

ಚಿಕಿತ್ಸೆ ಪಡೆದಿರುವ ಮಹದೇವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry