‘ರಾಹುಲ್ ಗಾಂಧಿ ಆಯೆ, ಸಿದ್ದರಾಮಯ್ಯ ಗಯೆ’: ಮುರಳೀಧರರಾವ್ ವ್ಯಂಗ್ಯ

7

‘ರಾಹುಲ್ ಗಾಂಧಿ ಆಯೆ, ಸಿದ್ದರಾಮಯ್ಯ ಗಯೆ’: ಮುರಳೀಧರರಾವ್ ವ್ಯಂಗ್ಯ

Published:
Updated:
‘ರಾಹುಲ್ ಗಾಂಧಿ ಆಯೆ, ಸಿದ್ದರಾಮಯ್ಯ ಗಯೆ’: ಮುರಳೀಧರರಾವ್ ವ್ಯಂಗ್ಯ

ತುಮಕೂರು: ‘ಸಿದ್ದರಾಮಯ್ಯ ಅವರು ಕುರ್ಚಿ ಖಾಲಿ ಮಾಡುವುದು ಸನ್ನಿಹಿತ. ರಾಹುಲ್ ಗಾಂಧಿ ಆಯೆ ಸಿದ್ಧರಾಮಯ್ಯ ಗಯೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ವ್ಯಂಗ್ಯವಾಡಿದರು. 

ಶುಕ್ರವಾರ ನಡೆದ ಬಿಜೆಪಿ ರಾಜ್ಯಮಟ್ಟದ ‘ಗೊಲ್ಲ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘5 ವರ್ಷದಲ್ಲಿ ಸಿದ್ದರಾಮಯ್ಯ ಅವರು ಬರೀ ನಿದ್ದೆ ಮಾಡಿದ್ದಾರೆ. ಈಗ ತಮ್ಮ ಹಿಂದೆ ಮತ್ತೊಂದು ಕಾರಿನಲ್ಲಿ ಇಟ್ಟಿಗೆ ಇಟ್ಟುಕೊಂಡು ಶಿಲಾನ್ಯಾಸ ಮಾಡುತಿದ್ದಾರೆ. ಸಮಯ ಇದ್ದಾಗ ಕೆಲಸ ಮಾಡದವರು ಈಗ ನವ ಕರ್ನಾಟಕ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ ಎಂಬುದು ಗೊತ್ತಿದೆ. ಹೀಗಾಗಿ ಅವರು ಅಭಿವೃದ್ಧಿ ಮಾತು ಆಡುತ್ತಿದ್ದಾರೆ. ಸಿದ್ದರಾಮಯ್ಯನವರದ್ದು ಡಕಾಯಿತಿ, ಮಾಫಿಯಾ ಸರ್ಕಾರ. ಇಂತಹ ಸರ್ಕಾರ ತೊಲಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry