ಮಚ್ಚು ಹಿಡಿದರು ಗಡ್ಡಪ್ಪ

5

ಮಚ್ಚು ಹಿಡಿದರು ಗಡ್ಡಪ್ಪ

Published:
Updated:
ಮಚ್ಚು ಹಿಡಿದರು ಗಡ್ಡಪ್ಪ

‘ಆಯ್ತು ಬುಡು’ ಎಂಬ ತಮ್ಮ ವಿಶಿಷ್ಟ ಡೈಲಾಗ್‌ನಿಂದಲೇ ಚಿತ್ರರಸಿಕರ ಮನಗೆದ್ದಿದ್ದ ‘ತಿಥಿ’ ಚಿತ್ರ ಖ್ಯಾತಿಯ ಗಡ್ಡಪ್ಪ ಸದ್ಯ ಮಚ್ಚು ಹಿಡಿದಿದ್ದಾರೆ. ರೇಣುಕಾಂಬ ಸಿನಿ ಕಂಬೈನ್ಸ್‌ ನಿರ್ಮಾಣದ ಮೊದಲ ಚಿತ್ರ ‘ಬಾಡು ಬಳ್ಳೇಪುರ’ ದಲ್ಲಿ ಕುಟ್ಟಯ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಊರು ಉದ್ಧಾರ ಆದಂಗೆ’ ಎಂಬ ಅಡಿಬರಹ ಹೊಂದಿರುವ ಈ ಚಿತ್ರವನ್ನು ಪಿ.ರಾಕೇಶ್ ಗೌಡ ನಿರ್ದೇಶಿಸಿದ್ದಾರೆ.

ಹಳ್ಳಿಯ ಸೊಗಡನ್ನು ಹಾಸ್ಯದ ಮೂಲಕ ನಿರೂಪಿಸುವ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಗಡ್ಡಪ್ಪ ಮಚ್ಚು ಹಿಡಿದು ಊರಲೆಲ್ಲಾ ಅಡ್ಡಾಡುತ್ತಾರೆ. ಆದರೆ ಯಾರನ್ನೂ ಸಾಯಿಸಲು ಅಲ್ಲ. ಮತ್ತೇಕೆ ಎಂಬ ಪ್ರಶ್ನೆಗೆ ಚಿತ್ರದ ನೋಡಿದ ನಂತರವಷ್ಟೇ ಉತ್ತರ ದೊರೆಯುತ್ತದೆ ಎನ್ನುವುದು ರಾಕೇಶ್‌ ಅವರ ಪ್ರತಿಕ್ರಿಯೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry