ಗಾಳಿ ಆಂಜನೇಯ ದೇವಸ್ಥಾನ ರಥೋತ್ಸವ ಮಾರ್ಗ ಬದಲಾವಣೆ

7

ಗಾಳಿ ಆಂಜನೇಯ ದೇವಸ್ಥಾನ ರಥೋತ್ಸವ ಮಾರ್ಗ ಬದಲಾವಣೆ

Published:
Updated:

ಬೆಂಗಳೂರು: ಗಾಳಿ ಆಂಜನೇಯ ದೇವಸ್ಥಾನದ ಜಾತ್ರೆ–ರಥೋತ್ಸವ ಪ್ರಯುಕ್ತ ಮಾರ್ಚ್‌ 25ರಿಂದ 27ರ ವರೆಗೆ ಮೈಸೂರು ರಸ್ತೆಯ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಶಿರಸಿ ವೃತ್ತದ ಕಡೆಯಿಂದ ಬರುವ ವಾಹನಗಳು, ಹೊಸಗುಡ್ಡದ ಹಳ್ಳಿ ಜಂಕ್ಷನ್‌, ಟಿಂಬರ್‌ ಯಾರ್ಡ್‌ ಬಡಾವಣೆ, ಮುನೇಶ್ವರ ಬ್ಲಾಕ್‌ನ 50 ಅಡಿ ರಸ್ತೆ, ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ ವರ್ತುಲ ರಸ್ತೆ ಮೂಲಕ ಮೈಸೂರು ರಸ್ತೆ ಸೇರಬಹುದು.

ಮೈಸೂರು ಕಡೆಯಿಂದ ಬರುವ ವಾಹನಗಳು ಕಿಂಕೋ ಜಂಕ್ಷನ್‌, ಬಾಪೂಜಿ ನಗರ ಜಂಕ್ಷನ್‌ ಹಾಗೂ ಮೈಸೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದು ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry