ಎನ್‌ಸಿಸಿ ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದ ರಾಹುಲ್: ಟ್ವಿಟರ್‌ನಲ್ಲಿ ಟ್ರೋಲ್

7

ಎನ್‌ಸಿಸಿ ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದ ರಾಹುಲ್: ಟ್ವಿಟರ್‌ನಲ್ಲಿ ಟ್ರೋಲ್

Published:
Updated:
ಎನ್‌ಸಿಸಿ ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದ ರಾಹುಲ್: ಟ್ವಿಟರ್‌ನಲ್ಲಿ ಟ್ರೋಲ್

ಬೆಂಗಳೂರು: ಎನ್‌ಸಿಸಿ ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದು ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗೊತ್ತಿಲ್ಲದಿರುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಹಲವು ಮಂದಿ ರಾಹುಲ್ ಅವರನ್ನು ಬೆಂಬಲಿಸಿದರೆ ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ. ಈ ವೇಳೆ, ‘ಎನ್‌ಸಿಸಿ ಸಿ ಪ್ರಮಾಣಪತ್ರ ಪಡೆದವರಿಗೆ ನೀವು ಏನು ಅವಕಾಶಗಳನ್ನು ಒದಗಿಸಲಿದ್ದೀರಿ’ ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ರಾಹುಲ್, ‘ಎನ್‌ಸಿಸಿ ತರಬೇತಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದಾಗ್ಯೂ, ಯುವ ಜನರಾಗಿ ನಿಮ್ಮ ಶಿಕ್ಷಣಕ್ಕೆ ಅನುಗುಣವಾಗಿ ನೀವು ಎಲ್ಲಿ ಸೇವೆ ಸಲ್ಲಿಸಬಲ್ಲಿರೋ ಅಲ್ಲಿ ನಿಮಗೆ ಅವಕಾಶ ಮಾಡಿಕೊಡಬಲ್ಲೆ’ ಎಂದು ಹೇಳಿದ್ದಾರೆ.

‘ಅವರು ಪ್ರಾಮಾಣಿಕರು, ಅವರು ಕೆಟ್ಟವರೆಂದು ನಾನು ಭಾವಿಸುತ್ತಿಲ್ಲ. ಎಷ್ಟೋ ರಾಜಕಾರಣಿಗಳು ಏನೂ ಗೊತ್ತಿಲ್ಲದೆ ಮಾತನಾಡುತ್ತಾ ಇರುತ್ತಾರೆ’ ಎಂದು ಸೌಮಿತ್ರನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಎನ್‌ಸಿಸಿ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದುದಕ್ಕೆ ಟ್ವಿಟರಾತಿಗಳು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಪ್ರಮಾಣಿಕವಾಗಿರುವುದರಲ್ಲಿ ತಪ್ಪೇನಿದೆ? ಕನಿಷ್ಠಪಕ್ಷ ಅವರು ಯಾರಿಗೂ ಸುಳ್ಳು ಮಾಹಿತಿ, ಸುಳ್ಳು ಭರವಸೆ ನಿಡಿಲ್ಲವಲ್ಲ. ಏನೂ ಗೊತ್ತಿಲ್ಲದೆ ಮಾತನಾಡುವ ಇತರ ರಾಜಕಾರಣಿಗಳಂತೆ ಅವರು ಮಾತನಾಡಿಲ್ಲವಷ್ಟೆ’ ಎಂದು ಅರ್ಪಿತಾ ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ರಾಹುಲ್: ಎನ್‌ಸಿಸಿ ಎಂದರೆ ನ್ಯಾಷನಲ್ ಕಾಂಗ್ರೆಸ್‌ ಕಮಿಟಿ.

ಮೋದಿ: ಎನ್‌ಸಿಸಿ ಎಂದರೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌’ ಎಂದು ವಿಶಾಲ್ ಸೂರ್ಯವಂಶಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಎನ್‌ಸಿಸಿ ಸಿ ಪ್ರಮಾಣಪತ್ರ ಹೊಂದಿರುವುದಕ್ಕೆ ಮತ್ತು ಅದರ ಮಹತ್ವದ ಬಗ್ಗೆ ಗೊತ್ತಿರುವ ಪ್ರಧಾನಿಯವರನ್ನು ಹೊಂದಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದು ರಾಜೀವ್ ಎನ್‌ ವರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಜತೆಗೆ, ಎನ್‌ಸಿಸಿ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿರುವ ವಿಡಿಯೊ, ರಾಹುಲ್‌ ಗಾಂಧಿ ಸಂವಾದದ ವಿಡಿಯೊವನ್ನು ಸೇರಿಸಿ ಪ್ರಕಟಿಸಿದ್ದಾರೆ.

‘ಇಟಲಿಯಲ್ಲಿ ಎನ್‌ಸಿಸಿ ಇಲ್ಲ’ ಎಂದು ಪ್ರಶಾಂತ್ ಪಿ ಭಟ್ ಎಂಬುವವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry