ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಸಕ್ತಿಗೆ ವೇದಿಕೆ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅರುವತ್ತರ ದಶಕದಲ್ಲಿ ಆರಂಭವಾದ ದೆಹಲಿಯ ರಾಷ್ಟ್ರೀಯ ನಾಟಕಶಾಲೆ (ಎನ್.ಎಸ್.ಡಿ.) ಭಾರತೀಯ ರಂಗಭೂಮಿಗೆ ಒಂದು ಹೊಸ ಸಂಚಲನವನ್ನು ನೀಡಿತು. ರಂಗಭೂಮಿಯನ್ನು ಅಧ್ಯಯನದ ಶಿಸ್ತಿಗೆ ಒಳಪಡಿಸುವ ನಿಟ್ಟಿನಲ್ಲಿ 1959ರಲ್ಲಿ ಎನ್‌.ಎಸ್‌.ಡಿ. ಪಾತ್ರ ಮಹತ್ವದ್ದು. ಕನ್ನಡ ರಂಗಭೂಮಿಯಲ್ಲಿ ಶೈಕ್ಷಣಿಕ ಅಧ್ಯಾಯ ಆರಂಭವಾದದ್ದು ರಾಷ್ಟ್ರೀಯ ನಾಟಕಶಾಲೆಯ ಪ್ರಭಾವದಿಂದಲೇ ಎನ್ನುವುದು ಈಗ ಇತಿಹಾಸ.

ರಂಗಭೂಮಿ ಹೆಚ್ಚು ಕ್ರಿಯಾಶೀಲವಾಗಿರುವ ಕರ್ನಾಟಕದಲ್ಲಿ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಎನ್.ಎಸ್.ಡಿ. ಪ್ರಾದೇಶಿಕ ಕೇಂದ್ರ ಬಂದಿತು. ಬೆಂಗಳೂರು ಘಟಕ ಗುರುನಾನಕ್ ಭವನದಲ್ಲಿ ತನ್ನ ಚಟುವಟಿಕೆ­ಗಳನ್ನು ಆರಂಭಿಸಿತು. ರಾಜ್ಯದ ಹಲವಾರು ಸ್ಥಳಗಳಿಗೂ ತನ್ನ ಅಲ್ಪಾವಧಿಯ ತರಬೇತಿಯ ಪ್ರಯೋಗಾತ್ಮಕ ನಾಟಕಗಳನ್ನು ಕೊಂಡೊಯ್ದು ತೋರಿಸಿತು. ಆ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಗಳನ್ನಿಡುತ್ತಾ ಸಾಗುತ್ತಿರುವ ರಾಷ್ಟ್ರೀಯ ನಾಟಕಶಾಲೆಯು ದಕ್ಷಿಣದ ಎಲ್ಲಾ ರಾಜ್ಯಗಳನ್ನು ಮುಟ್ಟಬೇಕಿದೆ.

ದೆಹಲಿಯ ನಾಟಕ ಶಾಲೆಗಿಂತ ಭಿನ್ನವಾದ ರಂಗಮಾದರಿಯನ್ನು ಸೃಷ್ಟಿಸುತ್ತಿದೆ. ದೇಶದಾದ್ಯಂತ ವಿವಿಧ ರಂಗಚಟುವಟಿಕೆಗಳಿಗೆ ಅಕಾಡೆಮಿ ಸಾಕ್ಷಿಯಾಗಿದೆ. ಪ್ರತಿಭಾವಂತ ನಿರ್ದೇಶಕರು, ನಟರು, ರಂಗಗೀತೆಗಳ ಗಾಯಕರನ್ನು ಅಕಾಡೆಮಿ ಪರಿಚಯಿಸಿದೆ. ರಂಗಕೇಂದ್ರದಲ್ಲಿ ಪ್ರಮುಖವಾಗಿ ದಕ್ಷಿಣಭಾರತದ ಸಾಂಪ್ರದಾಯಿಕ ಜನಪದ ಕಲೆಗಳು, ರಂಗಭೂಮಿ, ರಂಗತರಬೇತಿಯನ್ನು ನೀಡಲಾಗುತ್ತಿದೆ.

ಅಭಿನಯ, ವಸ್ತ್ರಾಲಂಕಾರ, ರಂಗಸಜ್ಜಿಕೆ, ರಂಗ­ಭೂಮಿ ಪ್ರವೇಶಿಕೆ ಮುಂತಾದ ಅಲ್ಪಾವಧಿಯ ವಿಭಿನ್ನ ಮಾದರಿಯ ತರಗತಿಗಳನ್ನು ಅನೇಕ ವರ್ಷಗಳಿಂದ ನೀಡುತ್ತಿದೆ. ಡಡಸತತ­ವಾಗಿ ಅಲ್ಪಾವಧಿಯ ತರಬೇತಿ ಕಾರ್ಯಾಗಾರ­ಗಳನ್ನು ನಡೆಸುತ್ತಾ ಬಂದಿದೆ. ಸ್ಥಳೀಯವಾದ ಮೂಲಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡಿರುವ ರಂಗಕೇಂದ್ರ ಕಳೆದ ವರ್ಷದಿಂದ ಅಧಿಕೃತವಾಗಿ ಒಂದು ವರ್ಷದ ಪೂರ್ಣಾ­ವಧಿ ರಂಗ ತರಬೇತಿಯ ಕೋರ್ಸ್‌ನ್ನು ಆರಂಭಿಸಿದೆ. ದ್ರಾವಿಡ ಭಾಷೆ, ಸಂಸ್ಕೃತಿ ಮತ್ತು ಜನಪದ ಕಲೆಗಳು ಪಠ್ಯಕ್ರಮದಲ್ಲಿ ಒಳಗೊಂಡಿದೆ. ಭಾರತೀಯ ರಂಗಭೂಮಿಯಲ್ಲಿ ಇದೊಂದು ಮಾದರಿ ಪ್ರಯೋಗಾಲಯವಾಗಬೇಕು ಎನ್ನುವುದು ರಂಗಪ್ರೇಮಿಗಳ ಹಂಬಲ.

ರಂಗಶಂಕರ
ನಗರದ ರಂಗಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಂಡಿರುವ ರಂಗಶಂಕರ 2004ರಲ್ಲಿ ಜೆ.ಪಿ.ನಗರದಲ್ಲಿ ಆರಂಭವಾಯಿತು. ಸಂಕೇತ್‌ ಟ್ರಸ್ಟ್‌ ಈ ರಂಗಕೇಂದ್ರವನ್ನು ನಿರ್ವಹಿಸುತ್ತಿದೆ. ಎಲ್ಲ ಭಾಷೆಗಳ ರಂಗಭೂಮಿಯನ್ನು ಸಮೃದ್ಧಗೊಳಸಬೇಕೆಂಬ ಗುರಿ ಹೊಂದಿದೆ. ‘ದಿನಕ್ಕೊಂದು ನಾಟಕ’ ಎಂಬ ಘೋಷಣೆಯನ್ನಾಧರಿಸಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸೋಮವಾರ ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿಯೂ ಇಲ್ಲಿ ನಾಟಕಗಳ ಪ್ರದರ್ಶನವಿರುತ್ತದೆ. ರಂಗಶಂಕರದ ರಂಗ ಮಂದಿರದಲ್ಲಿ ಇದುವರೆಗೂ 32 ಕ್ಕೂ ಅಧಿಕ ಭಾಷೆ­ಗಳ 4000ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಂಡಿವೆ. ‌ರಂಗಶಂಕರ ನಡೆಸುವ ವಾರ್ಷಿಕ ನಾಟಕೋತ್ಸವದಲ್ಲಿ ದೇಶದ ವಿವಿಧ ಭಾಷೆ, ಪ್ರದೇಶಗಳ ರಂಗಕರ್ಮಿ, ರಂಗತಂಡಗಳು ಪ್ರದರ್ಶನ ನೀಡುತ್ತವೆ.

ರಂಗಭೂಮಿ ನಿರ್ದೇಶನ, ನಟನೆಗೆ ಸಂಬಂಧಿಸಿದಂತೆ ತರಬೇತಿ ಶಿಬಿರಗಳನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಿದೆ. ಖ್ಯಾತ ನಿರ್ದೇಶಕರಿಂದ ಪ್ರತ್ಯೇಕ ತರಬೇತಿ ಆಯೋಜಿಸುತ್ತಿದೆ. ನಾಟಕ ಸ್ಪರ್ಧೆಗಳನ್ನೂ ನಡೆಸುತ್ತದೆ. ಯುವ ನಾಟಕೋತ್ಸವ, ಕನ್ನಡ ನಾಟಕೋತ್ಸವ.. ಹೀಗೆ ವಿವಿಧ ಭಾಷೆ, ಪ್ರದೇಶಗಳ ನಾಟಕಕ್ಕೆ ಇದು ವೇದಿಕೆಯಾಗಿದೆ.

ಎರಡು ‘ಬಿಂಬ’ಗಳು
ಬಿಂಬ ಸಂಸ್ಥೆ ಮಕ್ಕಳಿಗಾಗಿಯೇ ರೂಪಿಸಿದ ರಂಗಭೂಮಿ. ಹನುಮಂತನಗರ ಮತ್ತು ವಿಜಯನಗರದಲ್ಲಿ ಇದರ ಶಾಖೆಗಳಿವೆ. ಇದರ ರೂವಾರಿ ಪ್ರಸಿದ್ಧ ಸಾಹಿತಿ, ನಾಟಕಕಾರ ಎ.ಎಸ್.ಮೂರ್ತಿ. ಅಲ್ಪಾವಧಿ ಮತ್ತು ದೀರ್ಘಾವಧಿ ನಾಟಕ ತರಬೇತಿ ಶಿಬಿರಗಳನ್ನು ಕೇಂದ್ರ ಆಯೋಜಿಸುತ್ತಿದೆ. ಮಕ್ಕಳ ರಂಗಾಸಕ್ತಿಗೆ ನೀರೆರೆಯುವ ಜೊತೆಯಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದೆ. 30 ರಿಂದ 60 ವರ್ಷವಯಸ್ಸಿನವರಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿ ಶಿಬಿರಗಳನ್ನು ನಡೆಸುತ್ತದೆ. ಮಕ್ಕಳಿಗಾಗಿಯೇ ಬೇಸಿಗೆ ಶಿಬಿರಗಳನ್ನು ನಡೆಸುತ್ತದೆ. ಈ ಶಿಬಿರಗಳಲ್ಲಿ ರಂಗನಟನೆ, ರಂಗೀಗೀತೆ, ನೃತ್ಯ, ಪ್ರಸಾಧನ, ವಸ್ತ್ರ, ಮೂಕಾಭಿನಯ, ಚಿತ್ರಕಲೆಗಳನ್ನು ಕಲಿಸಲಾಗುತ್ತದೆ. ರಂಗಚಟುವಟಿಕೆಗಳಿಗೆ ಸಂಬಂಧಿಸಿದ ಗುಂಪುಚರ್ಚೆ, ಸಂವಾದಗಳನ್ನು ಆಯೋಜಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT