ದಟ್ಟಣೆ ಕಡಿಮೆ ಇದ್ದರೆ ಪ್ರಯಾಣ ದರ ಇಳಿಕೆ

7

ದಟ್ಟಣೆ ಕಡಿಮೆ ಇದ್ದರೆ ಪ್ರಯಾಣ ದರ ಇಳಿಕೆ

Published:
Updated:
ದಟ್ಟಣೆ ಕಡಿಮೆ ಇದ್ದರೆ ಪ್ರಯಾಣ ದರ ಇಳಿಕೆ

ನವದೆಹಲಿ: ಶತಾಬ್ದಿ ರೈಲುಗಳು ಸಂಚರಿಸುವ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ, ಅಂತಹ ಕಡೆ ಪ್ರಯಾಣ ದರ ಕಡಿಮೆ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಪ್ರಸ್ತುತ 45 ಶತಾಬ್ದಿ ರೈಲುಗಳು ಸಂಚರಿಸುತ್ತಿದ್ದು, ಈ ಯೋಜನೆಯ ಜಾರಿಗೆ 25 ರೈಲುಗಳನ್ನು ಗುರುತಿಸಲಾಗಿದೆ ಎಂದು

ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನವದೆಹಲಿ–ಅಜ್ಮೀರ್‌ ಮತ್ತು ಚೆನ್ನೈ–ಮೈಸೂರು ಮಾರ್ಗಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 17ರಷ್ಟು ಆದಾಯ ಹೆಚ್ಚಳವಾಗಿದೆ. ಅಲ್ಲದೆ ಟಿಕೆಟ್‌ ಕಾಯ್ದಿರಿಸುವಿಕೆ ಪ್ರಮಾಣ ಶೇ 63ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry